More

    ಹಾಂಗ್​ಕಾಂಗ್​ನಿಂದ ಕರಾಚಿಗೆ ಹೊರಟಿದ್ದ ಹಡಗನ್ನು ಗುಜರಾತ್​​ನಲ್ಲಿ ತಡೆದು ನಿಲ್ಲಿಸಿರುವ ಭಾರತೀಯ ರಕ್ಷಣಾ ಅಧಿಕಾರಿಗಳು; ಅದರಲ್ಲಿರುವ ‘ಅಟೋಕ್ಲೇವ್’​ ಬಗ್ಗೆ ಅನುಮಾನ

    ನವದೆಹಲಿ: ಕರಾಚಿಯ ಬಂದರಿಗೆ ಹೊರಟಿದ್ದ, ಹಾಂಗ್​ಕಾಂಗ್​ ಧ್ವಜವನ್ನು ಹೊಂದಿದ್ದ ಹಡಗನ್ನು ಗುಜರಾತ್​ನ ಕಂಡ್ಲಾ ಬಂದರಿನಲ್ಲಿ ರಕ್ಷಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಫೆ.3ರಂದೇ ಹಡಗನ್ನು ವಶ ಪಡಿಸಿಕೊಳ್ಳಲಾಗಿದ್ದು ಅದನ್ನು ಪರಿಶೀಲನೆ ನಡೆಸಲಾಗುತ್ತಿದೆ.

    ಹಡಗಿನಲ್ಲಿ ಖಂಡಾಂತರ (ಬ್ಯಾಲಿಸ್ಟಿಕ್)​ ಕ್ಷಿಪಣಿಗಳ ಉಡ್ಡಯನಕ್ಕೆ ಬಳಸುವ ಅಟೋಕ್ಲೇವ್​ ಇತ್ತು. ಈ ಅಟೋಕ್ಲೇವ್​ನ್ನು ಕೈಗಾರಿಕೆಗಳಲ್ಲಿ ಡ್ರೈಯರ್​​ನ್ನಾಗಿ ಕೂಡ ಉಪಯೋಗಿಸಲಾಗುತ್ತಿದೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳು ಹಡಗನ್ನು ವಶಕ್ಕೆ ಪಡೆದಿದ್ದಾರೆ.

    ತಡೆಹಿಡಿದ ಹಡಗಿನಲ್ಲಿರುವ ಅಟೋಕ್ಲೇವ್​​ನ್ನು ಈಗಾಗಲೇ ಸ್ಥಳೀಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ ಹೆಚ್ಚಿನ ತನಿಖೆ ನಡೆಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮತ್ತೊಂದು ತಂಡವನ್ನು ಗುಜರಾತ್​ ಬಂದರಿಗೆ ಕಳಿಸಿದೆ ಎಂದು ಮೂಲಗಳು ತಿಳಿಸಿವೆ.

    ಜಿಯಾಂಗ್ಸು ಪ್ರಾಂತ್ಯದಲ್ಲಿನ ಯಾಂಗಟ್ಜೆ ನದಿ ತೀರದಿಂದ ಹೊರಟಿದ್ದ ಡಾ ಕುಯಿ ಯಾನ್ ಎಂಬ ಹೆಸರಿನ ಈ ಹಡಗು ಪಾಕಿಸ್ತಾನದ ಕರಾಚಿಯಲ್ಲಿರುವ ಖಾಸಿಮ್​ ಬಂದರಿಗೆ ಹೊರಟಿತ್ತು.

    ಇದರಲ್ಲಿ ಅನುಮಾನಾಸ್ಪದ ಅಟೋಕ್ಲೇವ್​ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರ ಅನ್ವಯ ಹಡಗನ್ನು ತಡೆ ಹಿಡಿದು ಪರಿಶೀಲನೆ ನಡೆಸಿದಾಗ ಅದರಲ್ಲಿರುವ ಅಟೋಕ್ಲೇವ್​ ಸೈನ್ಯ ಮತ್ತು ನಾಗರಿಕ ಉದ್ದೇಶಗಳಿಗೆ ಬಳಸಬಹುದಾಗಿರುವಂಥದ್ದು ಎಂಬುದು ಗೊತ್ತಾಗಿದೆ.

    ಡಿಆರ್​ಡಿಒದ ಎರಡನೇ ತಂಡ ಕೂಡ ಮತ್ತೊಮ್ಮೆ ಸೂಕ್ಷ್ಮವಾಗಿ ಹಡಗು ಹಾಗೂ ಅಟೋಕ್ಲೇವ್​ ಯಂತ್ರವನ್ನು ಪರಿಶೀಲನೆ ನಡೆಸಲಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts