More

    ಗ್ರಾಮೀಣರ ಬದುಕೇ ಜನಪದ ಸಾಹಿತ್ಯ ರಚನೆಗೆ ಪ್ರೇರಣೆ

    ಸವಣೂರ: ಗ್ರಾಮೀಣರ ಬದುಕೇ ಜನಪದ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದೆ ಎಂದು ನಾಟಕ ರಚನೆಕಾರ ಚಂದ್ರಶೇಖರ ಅಕ್ಕಿ ಹೇಳಿದರು.

    ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಸೇವಾ ಸಂಘ ಪ್ರತಿಷ್ಠಾಪತಿಸಿದ ಗಣೇಶ ಸ್ಥಳದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಿಬಸ್ಯನ ಗೋಳಾಟ- ಸರಸುವಿನ ಚೆಲ್ಲಾಟ ಹಾಸ್ಯ ಭರಿತ ಕಿರುನಾಟಕ ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ನಿತ್ಯ ಒತ್ತಡದ ಬದುಕಿನ ಮಧ್ಯ ಮನರಂಜನೆ ಬಯಸುವವರು ಸಾಮಾಜಿಕ ಚಿಂತನೆಯ ಹಾಸ್ಯ ನಾಟಕ ಪ್ರದರ್ಶನಕ್ಕೆ ಸಹಕಾರ ನೀಡುತ್ತಿರುವುದು ಸಂತಸ ತಂದಿದೆ. ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಶಿಬಸ್ಯನ ಗೋಳಾಟ- ಸರಸುವಿನ ಚೆಲ್ಲಾಟ ಎಂಬ ಕಿರು ನಾಟಕ ಉತ್ತಮವಾಗಿ ಮೂಡಿ ಬಂದಿರುವುದು ಮುಂದಿನ ಬರವಣಿಗೆಯ ಜವಾಬ್ದಾರಿ ಹೆಚ್ಚಿಸಿದೆ ಎಂದರು.

    ಕಲಾವಿದರಾದ ಆನಂದ ಗೋಡ್ಯಾಳ, ಶಿವಪುತ್ರಯ್ಯ ಹಿರೇಮಠ, ರಾಜಣ್ಣ ಹಾವೇರಿ, ನಿಂಬಣ್ಣ ಜಾಡರ, ನಿಂಗಪ್ಪ ತೊಲಕ್ಕೊಪ್ಪದ, ಮಲ್ಲಪ್ಪ ಮುಗದೂರ, ಹುಲ್ಲಪ್ಪ ಜಾಡರ, ವೀಣಾ ಶಿರಸಿ, ನಯನಾ ಹಾನಗಲ್ಲ ಅವರನ್ನು ವಿನಾಯಕ ಸೇವಾ ಸಂಘದಿಂದ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿತು. ಗ್ರಾಮದ ಪ್ರಮುಖರು, ವಿನಾಯಕ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts