More

    ಮಹದಾಯಿ ಹೋರಾಟದ ಹಾದಿ

    ಹುಬ್ಬಳ್ಳಿ: 1960- ವಿದ್ಯುಚ್ಛಕ್ತಿ ಉತ್ಪಾದನೆಗಾಗಿ ಮಹದಾಯಿ ನೀರು ಬಳಕೆಗೆ ಕರ್ನಾಟಕ ಸರ್ಕಾರದ ಚಿಂತನೆ 1980-ಯೋಜನೆ ರೂಪಿಸಲು ಅಂದಿನ ವಿಪಕ್ಷ ನಾಯಕ ಎಸ್.ಆರ್. ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು.

    1988-ಕರ್ನಾಟಕ ಸರ್ಕಾರದಿಂದ ಕಳಸಾ-ಬಂಡೂರಿ ನಾಲಾ ಯೋಜನೆಗೆ ಅನುಮೋದನೆ 1989-ಯೋಜನೆಗೆ ಗೋವಾ ಸರ್ಕಾರದಿಂದ ವಿರೋಧ 2000-ಕರ್ನಾಟಕ ಸರ್ಕಾರದಿಂದ 49.20 ಕೋ. ರೂ. ಅಂದಾಜು ವೆಚ್ಚಕ್ಕೆ ಯೋಜನೆ ಸಿದ್ಧ. ಮೇ 5, 2002- ಗೋವಾ ಸರ್ಕಾರದಿಂದ ಕೇಂದ್ರಕ್ಕೆ ತಕರಾರು ಅರ್ಜಿ ಜುಲೈ 9, 2002- ನ್ಯಾಯಾಧಿಕರಣ ರಚಿಸಲು ಗೋವಾ ಸರ್ಕಾರದಿಂದ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಪತ್ರ ಸೆಪ್ಟೆಂಬರ್ 19, 2002- ಯೋಜನೆಗೆ ನೀಡಿದ್ದ ಒಪ್ಪಿಗೆ ಹಿಂದಕ್ಕೆ ಪಡೆದ ಕೇಂದ್ರ ಸರ್ಕಾರ ಡಿಸೆಂಬರ್ 20, 2002- ಗೋವಾ-ಕರ್ನಾಟಕ ರಾಜ್ಯಗಳ ಸಚಿವರ ಸಭೆ ವಿಫಲ. ಸೆಪ್ಟೆಂಬರ್ 22, 2006-ಕಳಸಾ ಬಂಡೂರಿ ನಾಲಾ ಯೋಜನೆಗೆ ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಭೂಮಿ ಪೂಜೆ

    ನವಂಬರ್ 15, 2006-ಕಾಮಗಾರಿಗೆ ತಡೆ ನೀಡುವಂತೆ ಸವೋಚ್ಚ ನ್ಯಾಯಾಲಯಕ್ಕೆ ಗೋವಾ ಸರ್ಕಾರದಿಂದ ತಕರಾರು ಅರ್ಜಿ. ನವಂಬರ್ 27, 2006-ಕಾಮಗಾರಿಗೆ ತಡೆ ನೀಡಲು ಸವೋಚ್ಚ ನ್ಯಾಯಾಲಯ ನಿರಾಕರಣೆ, ಅರ್ಜಿ ವಜಾ ನವಂಬರ್ 16, 2010-ಕೇಂದ್ರ ಸರ್ಕಾರದಿಂದ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ ನೇತೃತ್ವದಲ್ಲಿ ಮಹದಾಯಿ ನ್ಯಾಯಾಧಿಕರಣ ರಚನೆ 2014- ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯಾಧಿಕರಣ ತಂಡ ಭೇಟಿ. ಸಾಧಕ-ಬಾಧಕಗಳ ಕುರಿತು ಚರ್ಚೆ ಜುಲೈ 16, 2015-ರೈತ ಸೇನಾ ಕರ್ನಾಟಕ ಸಂಘಟನೆಯಿಂದ ಅನಿರ್ದಿಷ್ಟಾವಧಿಯ ಹೋರಾಟ ಆರಂಭ. ಜುಲೈ 28, 2016-ಮಹದಾಯಿ ನ್ಯಾಯಾಧಿಕರಣದಿಂದ ರಾಜ್ಯದ ಮಧ್ಯಂತರ ಅರ್ಜಿ ವಜಾ. ನವಲಗುಂದ, ನರಗುಂದದಲ್ಲಿ ಉಗ್ರ ಪ್ರತಿಭಟನೆ, ಹಿಂಸಾಚಾರ ಸೆಪ್ಟೆಂಬರ್ 14, 2018-ಮಹದಾಯಿ ನ್ಯಾಯಾಧಿಕರಣ ತೀರ್ಪ. ಕರ್ನಾಟಕಕ್ಕೆ 13.52 ಟಿಎಂಸಿ ನೀರು ಹಂಚಿಕೆ. ಅಕ್ಟೋಬರ್ 23, 2019- ಕೇಂದ್ರದಿಂದ ಕಳಸಾ ಬಂಡೂರಿ ಯೋಜನೆಗೆ ಪರಿಸರ ಅನುಮತಿ ಡಿಸೆಂಬರ್ 18, 2019-ಗೋವಾ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಪರಿಸರ ಅನುಮತಿಗೆ ಸಚಿವಾಲಯದಿಂದ ತಡೆ ಫೆಬ್ರವರಿ 20, 2020-ನ್ಯಾಯಾಧೀಕರಣದ ತೀರ್ಪಿನಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts