More

    ಗಡಿನೇರಲು ರಸ್ತೆ ಕೆಸರುಮಯ

    ಹೊಸನಗರ: ತಾಲೂಕಿನ ಗಡಿನೇರಲು ಗ್ರಾಮದ ವ್ಯಾಪ್ತಿಯಲ್ಲಿ ಎಂಪಿಎA ನೆಡುತೋಪು ನಿರ್ಮಾಣ ಮತ್ತು ಮರಗಳ ಕಡಿತಲೆಯಿಂದ ನಿತ್ಯ ಹಲವು ವಾಹನಗಳ ಸಂಚಾರದಿAದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಓಡಾಡಲು ಪರದಾಡುವಂತಹ ಸ್ಥಿತಿ ಉಂಟಾಗಿದೆ.

    ನಿಟ್ಟೂರು(ನಾಗೋಡಿ) ಗ್ರಾಪಂ ವ್ಯಾಪ್ತಿಯ ಹೊಸನಾಡು ಗ್ರಾಮದ ಗಡಿನೇರಲು ರಸ್ತೆ ಈಗ ಗದ್ದೆಯಂತಾಗಿದೆ. ಗ್ರಾಮಸ್ಥರು ಬೈಕ್ ಓಡಾಡುವುದಿರಲಿ ಪಾದಚಾರಿಗಳಿಗೂ ತೀವ್ರ ತೊಂದರೆಯಾಗಿದೆ. ಪ್ರತಿ ದಿನ ಈ ಮಾರ್ಗದಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.
    ಎಂಪಿಎA ಕಾಮಗಾರಿ ತಂದ ಕುತ್ತು:
    ಗಡಿನೇರಲು ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಅವರೆಲ್ಲರ ಅಗತ್ಯಗಳಿಗೆ ಈ ಸಂಪರ್ಕ ರಸ್ತೆಯೇ ಜೀವಾಳ. ಗ್ರಾಮದ ಸರ್ವೇ ನಂ.205ರಲ್ಲಿ 509 ಎಕರೆ ಗೋಮಾಳ ಭೂಮಿ ಇದ್ದು, ಅದರಲ್ಲಿ ಗ್ರಾಮಕ್ಕೆ ಹೊಂದಿಕೊAಡಿರುವ 78 ಎಕರೆ ಜಾಗದಲ್ಲಿ ಎಂಪಿಎAನ ಅಕೇಶಿಯಾ ನೆಡುತೋಪು ಇದೆ. 2020ರಲ್ಲಿ 40 ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಜಾನುವಾರುಗಳಿಗೆ ಮೇಯಲು ಜಾಗವಿಲ್ಲದಂತಾಗಿದೆ. ಮತ್ತೊಂದೆಡೆ ಮರಗಳ ಕಡಿತಲೆ, ಅಕೇಶಿಯಾ ಗಿಡಗಳ ನಾಟಿ ಕಾರ್ಯಕ್ಕಾಗಿ ನಿರಂತರ ಎಂಪಿಎA ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿದೆ. ಗುಂಡಿಗಳಲ್ಲಿ ಮಳೆ ನೀರು ನಿಂತು ಗದ್ದೆಯಂತಾಗಿದೆ. ಇನ್ನು ರಸ್ತೆ ಬದಿಯ ಅಕೇಶಿಯಾ ಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಈ ಬಗ್ಗೆ ಸಂಬAಽಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

    ನಿಯಮ ಮೀರಿದ ಎಂಪಿಎA
    ಯಾವುದೇ ಗ್ರಾಮದಲ್ಲಿ ಅಕೇಶಿಯಾ ಮರಗಳ ಕಡಿತಲೆ ಮಾಡಿದರೆ ಒಟ್ಟು ಮೌಲ್ಯದ ಶೇ.೫ರಷ್ಟನ್ನು ಆಯಾ ಗ್ರಾಮದ ಅಭಿವೃದ್ಧಿಗೆ ನೀಡಬೇಕು. ಆ ಮೂಲಕ ಗ್ರಾಮದ ಮೂಲ ಸೌಲಭ್ಯಕ್ಕೆ ಉತ್ತೇಜನ ನೀಡಬೇಕು ಎಂಬ ನಿಯಮವಿದ್ದರೂ ಎಂಪಿಎA ಆ ನಿಯಮವನ್ನೇ ಗಾಳಿಗೆ ತೋರಿದೆ. ಅಕೇಶಿಯಾ ಮರಗಳ ಕಡಿತಲೆ ಮೂಲಕ ಎಂಪಿಎA ಕೋಟ್ಯಂತರ ರೂ. ಆದಾಯಗಳಿಸುತ್ತಿದೆ. ಆದರೆ ಹದಗೆಟ್ಟ ರಸ್ತೆ, ವಿದ್ಯುತ್ ವ್ಯತ್ಯಯ ಸೇರಿ ವಿವಿಧ ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುವಂತಾಗಿದೆ.
    ಯಾರನ್ನು ಕೇಳಿದರೂ ಉತ್ತರವಿಲ್ಲ
    ಡಿನೇರಲು ರಸ್ತೆಯನ್ನು ಬೇಸಿಗೆಯಲ್ಲಿ ಗ್ರಾಪಂ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಅಕೇಶಿಯಾ ಕಡಿತಲೆ, ಬೃಹತ್ ವಾಹನಗಳ ನಿರಂತರ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಯಾರನ್ನು ಕೇಳಿದರೂ ಉತ್ತರವಿಲ್ಲ, ಪರಿಹಾರವೂ ಇಲ್ಲ ಎಂಬAತಾಗಿದೆ ಎಂದು ಗಡಿನೇರಲು ಗ್ರಾಮದ ಹಿರಿಯ ಕೃಷ್ಣ ಆಚಾರ್ ಅವರ ಆರೋಪ.

    ಗಡಿನೇರಲು ರಸ್ತೆಯನ್ನು ಬೇಸಿಗೆಯಲ್ಲಿ ಗ್ರಾಪಂ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಎಂಪಿಎA ಮರಗಳ ಕಡಿತಲೆಯಿಂದ ಬಂದ ಆದಾಯದಲ್ಲಿ ಶೇ.೫ ಪಂಚಾಯಿತಿಗೆ ನೀಡಬೇಕು. ಆದರೆ ಎಂಪಿಎA ನಿಯಮಗಳನ್ನು ಗಾಳಿಗೆ ತೂರಿ ಪಂಚಾಯಿತಿಯನ್ನು ವಂಚಿಸಿದೆ. ಈಗ ರಸ್ತೆ ಹದಗೆಟ್ಟಿದ್ದು ಗ್ರಾಮಸ್ಥರು ಪಂಚಾಯಿತಿಯನ್ನು ದೂರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
    | ರಾಘವೇಂದ್ರ ಆಚಾರ್
    ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts