More

    ಯೋಜನೆಗಳಿಗಿಂತ ದೇಶದ ಪ್ರಗತಿ ಮುಖ್ಯ

    ಶೃಂಗೇರಿ: ಗ್ಯಾರಂಟಿ ಯೋಜನೆಗಳಿಗಿಂತ ನಮಗೆ ದೇಶದ ಪ್ರಗತಿ ಅತ್ಯಂತ ಮಹತ್ವ. ಲೋಕಸಭಾ ಚುನಾವಣೆಯಲ್ಲಿ ಸರ್ವರೂ ಪಾಲ್ಗೊಂಡು ಸಾಮಾನ್ಯ ಜನರಿಗೆ ಸ್ಪಂದಿಸುವ ಪ್ರಾಮಾಣಿಕರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಗುರುತರ ಜವಾಬ್ದಾರಿ ಎಂದು ಮೆಣಸೆ ಗ್ರಾಪಂ ಮಾಜಿ ಅಧ್ಯಕ್ಷ ನವೀನ್ ಆರ್. ಕಲ್ಕಟ್ಟೆ ತಿಳಿಸಿದರು.

    ಕಲ್ಕಟ್ಟೆಯಲ್ಲಿ ನಾವು ಮೋದಿ ಪರಿವಾರ-ಮೋದಿಗಾಗಿ ಈ ಭಾನುವಾರ ಮಹಾಸಂಪರ್ಕ ಅಭಿಯಾನದಲ್ಲಿ ಮಾತನಾಡಿ, ಸಂವಿಧಾನ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಕಾರ್ಯ. ಪ್ರತಿ ಮತದಾರನೂ ವಿವೇಚನೆಯಿಂದ ಹಕ್ಕು ಚಲಾಯಿಸಬೇಕು. ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಘನತೆ ಹೆಚ್ಚಿಸಿದ್ದಾರೆ. ದೇಶಕ್ಕೆ ಸರ್ವಾಧಿಕಾರಿ ಧೋರಣೆ ಭಾವ ತೋರುವ ಪಕ್ಷದ ಅವಶ್ಯಕತೆ ನಮಗೆ ಬೇಕಿಲ್ಲ. ಪ್ರತಿ ನಾಗರಿಕನೂ ದೇಶ ಮೊದಲು ಎಂಬ ಭಾವದಿಂದ ಮತ ಚಲಾಯಿಸಬೇಕು. ರಾಷ್ಟ್ರದ ಪ್ರಗತಿಗೆ ನರೇಂದ್ರ ಮೋದಿ ಸರ್ಕಾರ ಅನಿವಾರ್ಯ ಎಂದರು.
    ಮಹಾಸಂಪರ್ಕ ಅಭಿಯಾನದಲ್ಲಿ ಮೆಣಸೆ ಗ್ರಾಪಂ ಸದಸ್ಯರಾದ ಸುಮಲತಾ, ಅಜಿತ್ ಶೆಟ್ಟಿ, ಮಾಜಿ ಸದಸ್ಯೆ ಸುಮಂಗಲಿ ಆನಂದಸ್ವಾಮಿ, ಮುಖಂಡರಾದ ಭೋಜಕುಲಾಲ್, ಕೃಷ್ಣ, ನಯನಾ, ಆರ್.ಮಮತಾ, ಬಿ.ಶೀನ, ಪ್ರವೀಣ್, ತಿಮ್ಮಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts