More

    ಪ್ರಾಥಮಿಕ ಹಂತವೇ ಜೀವನದ ತಳಪಾಯ

    ಸಿಂದಗಿ :ಪ್ರಾಥಮಿಕ ಹಂತದಲ್ಲಿ ಪಡೆದ ಸಂಸ್ಕಾರದ ಶಿಕ್ಷಣವೇ ಜೀವನದ ಬಹುಮುಖ್ಯ ತಳಪಾಯವಾಗುತ್ತದೆ ಎಂದು ಮಕ್ಕಳ ಸಾಹಿತಿ, ವಿಶ್ರಾಂತ ಶಿಕ್ಷಕ ಹ.ಮ.ಪೂಜಾರ ಹೇಳಿದರು.

    ಪಟ್ಟಣದ ಭಾವಿಕಟ್ಟಿ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ೨೦೦೦-೨೦೦೧ನೇ ಸಾಲಿನ ವಿದ್ಯಾರ್ಥಿ ಬಳಗದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಪ್ರಾಥಮಿಕ ಹಂತದಲ್ಲೇ ಓದು, ಪಾಠ ಮತ್ತು ಆಟಗಳನ್ನು ರೂಢಿಸಿಕೊಂಡವರು ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾರೆ. ಗುರುವಿನಿಂದ ಪಡೆದ ಶಿಕ್ಷಣ ಸಂಸ್ಕಾರಗಳೇ ನಮ್ಮೆಲ್ಲರ ಭವಿಷ್ಯದ ನಿರ್ಮಾತೃಗಳು ಎಂದರು.

    ವಿಶ್ರಾಂತ ಶಿಕ್ಷಕ ಎ.ಎಂ.ಗುಡಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಶಿಷ್ಯ ಬಳಗದಿಂದ ಈ ಸತ್ಕಾರ ಮತ್ತು ಗುರುವಂದನೆ ಸ್ವೀಕರಿಸುತ್ತಿರುವ ನಮಗೆ ವೃತ್ತಿ ಸಾರ್ಥಕತೆ ಜತೆಗೆ ನಿಮ್ಮೆಲ್ಲರ ಎರಡು ದಶಕಗಳ ನಂಟು, ಶಾಲೆ ಆವರಣಕ್ಕೆ ಕರೆ ತಂದವು ಎಂದು ನೆನಪಿಸಿದರು.

    ವಿಶ್ರಾಂತ ಶಿಕ್ಷಕ ಮಲ್ಲು ಘತ್ತರಗಿ ಮಾತನಾಡಿದರು. ಸೀಮಾ ಸಾಲಿಮಠ, ಅಬ್ದುಲ್ ಬಾಗವಾನ, ಹೀರಾಸಿಂಗ್ ರಜಪೂತ, ಸುರೇಶ ಕುಂಬಾರ ವಿದ್ಯಾರ್ಥಿ ಬಳಗದ ಪರವಾಗಿ ಮಾತನಾಡಿ, ಗುರು ಮಾತ್ರ ಗುರಿ ತೋರಬಲ್ಲ ಎನ್ನುವುದಕ್ಕೆ ನಮ್ಮ ಇಂದಿನ ಜೀವನವೇ ತಾಜಾ ಉದಾಹರಣೆ ಎಂದರು.

    ವಿಶ್ರಾಂತ ಶಿಕ್ಷಕರಾದ ಡಿ.ಕೆ.ರೊಟ್ಟಿ, ಎಸ್.ಡಿ.ಗೋಂಧಳಿ, ಎಂ.ಎಂ.ಆಳಂದ, ಕೆ.ಬಿ.ಮಳ್ಳಿ, ಶಿಕ್ಷಕಿಯರಾದ ವಿ.ಎಸ್.ದೇಶಪಾಂಡೆ, ಜೆ.ಎಸ್.ಗೋಲಶೆಟ್ಟಿ, ಎಲ್.ಕೆ.ನಾಯಿಕ, ಎಸ್.ಪಿ.ಜಂಗಿನಮಠ ಅವರನ್ನು ವಿದ್ಯಾರ್ಥಿ ಬಳಗದಿಂದ ಸನ್ಮಾನಿಸಲಾಯಿತು.

    ವಿದ್ಯಾರ್ಥಿಗಳಾದ ರೇಣುಕಾ ಪಟ್ಟಣಶೆಟ್ಟಿ, ಶ್ವೇತಾ ತಿಳಗೂಳ, ಲಕ್ಷ್ಮಿ ಹಡಪದ, ಸೀಮಾ ಸಾಲಿಮಠ, ಸುಧಾ ಬಬಲೇಶ್ವರ, ರಾಜಶ್ರೀ ಪಟ್ಟಣಶೆಟ್ಟಿ, ಡಾ.ಮಂಜು ಪತ್ತಾರ, ಶರಣು ಬಡಾನೂರ, ಕಿರಣ ಸಿಂದಗಿ, ಈರಣ್ಣ ದ್ಯಾಬೇರಿ, ರವಿ ಯಳಸಂಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts