More

    ಎಲ್​ಪಿಜಿ ಸಿಲಿಂಡರ್​ ದರ ಹೆಚ್ಚಳ! ಈಗ ಎಷ್ಟು ಬೆಲೆ ತೆರಬೇಕು ಗೊತ್ತೇ?

    ನವದೆಹಲಿ: ದೇಶದ ಜನತೆಗೆ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಮತ್ತೊಮ್ಮೆ ಶಾಕ್​ ನೀಡಿದೆ. ಮಾಸಿಕ ಪರಿಷ್ಕರಣೆ ಮಾಡಿರುವ ಸಂಸ್ಥೆ ದೇಶಾದ್ಯಂತ ಎಲ್​ಪಿಜಿ ಸಿಲಿಂಡರ್​ ದರವನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ.

    ಇದನ್ನೂ ಓದಿ: ಗೋಡೆ ಕುಸಿದು ಗೃಹಿಣಿ ಸಾವು ಪ್ರಕರಣಕ್ಕೆ ಟ್ವಿಸ್ಟ್​: ಅನಾಮಧೇಯ ಕರೆಯಿಂದ ಗಂಡನ ಕರಾಳ ಮುಖ ಬಯಲು!

    ದೇಶೀಯ ಬಳಕೆಯ 14.2 ಕೆಜಿ ಎಲ್​ಪಿಜಿ ಸಿಲಿಂಡರ್ (ಸಬ್ಸಿಡಿ ರಹಿತ)​ ಬೆಲೆಯನ್ನು 50 ರೂಪಾಯಿ ಹೆಚ್ಚಿಸಲಾಗಿದೆ. 5 ಕೆಜಿ ಸಿಲಿಂಡರ್​ ಬೆಲೆಯನ್ನು 18 ರೂಪಾಯಿ ಏರಿಸಲಾಗಿದೆ. ಅದೇ ರೀತಿ 19 ಕೆಜಿ ಸಿಲಿಂಡರ್​ ದರವನ್ನು 36.50 ರೂಪಾಯಿ ಹೆಚ್ಚಳ ಮಾಡಲಾಗಿದೆ.

    ಇದನ್ನೂ ಓದಿ: ಬಾವನ ಮದುವೆಗೆಂದು ಅತ್ತೆ ಮನೆಗೆ ಬಂದವನು ಮಸಣ ಸೇರಿದ! ಸರ್ಕಾರಿ ಶಾಲೆಯ ಆವರಣದಲ್ಲಿ ಆತ್ಮಹತ್ಯೆ

    ಬೆಲೆ ಹೆಚ್ಚಳದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್​ ಬೆಲೆ ಈಗ 644 ರೂಪಾಯಿಯಾಗಿದೆ. ಹಾಗೆಯೇ ಕೋಲ್ಕತದಲ್ಲಿ 670.50 ರೂ, ಮುಂಬೈನಲ್ಲಿ 644 ಮತ್ತು ಚೆನ್ನೈನಲ್ಲಿ 660 ರೂ.ನಷ್ಟಾಗಿದೆ. ಬೆಲೆ ಹೆಚ್ಚಳಕ್ಕೂ ಮೊದಲು, ದೆಹಲಿಯಲ್ಲಿ 594 ರೂ., ಕೋಲ್ಕತ್ತಾದಲ್ಲಿ 620.50 ರೂ., ಮುಂಬೈನಲ್ಲಿ 594 ಮತ್ತು ಚೆನ್ನೈನಲ್ಲಿ 610 ರೂ.ಗೆ ಸಿಲಿಂಡರ್​ ಮಾರಾಟ ಮಾಡಲಾಗುತ್ತಿತ್ತು. (ಏಜೆನ್ಸೀಸ್​)

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ರಾಜ್ಯ ಸರ್ಕಾರದ ಅಧೀನ ಸಂಸ್ಥೆ ಸಿಎಸ್‍ಜಿಯಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts