More

    ಚುನಾವಣಾ ಪ್ರಚಾರ ಸಭೆಯಲ್ಲೇ ಬಂಧನಕ್ಕೊಳಗಾದ ನಾಯಕ; ಕಾರಣವೇನು ಗೊತ್ತಾ?

    ಚೆನ್ನೈ: ಚುನಾವಣಾ ಪ್ರಚಾರಗಳಲ್ಲಿ ಹೂವಿನ ಹಾರಗಳು ಕೊರಳಿಗೆ ಬೀಳುವುದು ನೋಡಿದ್ದೇವೆ. ಅದೇ ರೀತಿ ಕೆಲವು ನಾಯಕರಿಗೆ ಚಪ್ಪಲಿ ಎಸೆತ, ಕಲ್ಲು ಎಸೆತವನ್ನೂ ಕೇಳಿದ್ದೇವೆ. ಆದರೆ ಪ್ರಚಾರ ಸಭೆಯ ವೇದಿಕೆ ಮೇಲಿದ್ದ ನಾಯಕನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋದರೆ? ಇಂತದ್ದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಇದನ್ನೂ ಓದಿ: ದೀದಿಗೆ ಕೈ ಕೊಡಲು ಸಿದ್ಧರಾಗಿದ್ದಾರಂತೆ ಅವರ ಬಲಗೈ ಬಂಟ; ಅಮಿತ್​ ಷಾ ಕಾಲಿಟ್ಟ ನೆಲದಲ್ಲಿ ಭಾರಿ ಸಂಚಲನ

    ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಅವರ ಮಗ ಹಾಗೂ ಪಕ್ಷದ ಯುವ ವಿಭಾಗದ ಕಾರ್ಯದರ್ಶಿ ಉದಯಾನಿಧಿ ಸ್ಟಾಲಿನ್​ ಅವರು ಶುಕ್ರವಾರ ನಾಗಪಟ್ಟಣಂ ಜಿಲ್ಲೆಯಲ್ಲಿ ಪಕ್ಷದ ಪ್ರಚಾರ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಪೊಲೀಸರು ಅವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

    ಈ ರೀತಿ ಏಕಾಏಕಿ ಬಂಧನಕ್ಕೆ ಕಾರಣವಾಗಿದ್ದು ಲಾಕ್​ಡೌನ್​ ನಿಯಮ ಉಲ್ಲಂಘನೆ. ಕರೊನಾ ಹಿನ್ನೆಲೆಯಲ್ಲಿ 200 ಜನರಿಗೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುವಂತಿಲ್ಲ ಎನ್ನುವ ನಿಯಮವಿದೆ. ಹಾಗಿದ್ದರೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ದರಿಂದಾಗಿ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ನಾಯಕನನ್ನು ಬಂಧಿಸಿದ ಪೊಲೀಸರು ಸ್ವಲ್ಪ ಸಮಯದ ನಂತರ ಅವರನ್ನು ಬಿಟ್ಟು ಕಳುಹಿಸಿರುವುದಾಗಿಯೂ ತಿಳಿಸಲಾಗಿದೆ.

    ಇದನ್ನೂ ಓದಿ: ಯೋಗಿ ಸರ್ಕಾರದಲ್ಲಿ ಲವ್​ ಜಿಹಾದ್​ ಬಗ್ಗೆ ಮಸೂದೆ ಸಿದ್ಧವಾಗುತ್ತಿಲ್ಲ; ಹಾಗಾದರೆ ಇಷ್ಟು ದಿನ ಹೇಳಿದ್ದು ಸುಳ್ಳಾ?

    ಡಿಎಂಕೆ ಪಕ್ಷವು ಶುಕ್ರವಾರ 75 ದಿನಗಳ ಸುರ್ದೀರ್ಘ ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಿದೆ. ಹೊಸ ಉದಯದತ್ತ ಸ್ಟಾಲಿನ್​ ಧ್ವನಿ ಹೆಸರಿನಲ್ಲಿ ಆರಂಭಿಸಲಾಗಿರುವ ಈ ಅಭಿಯಾನದಲ್ಲಿ ಪಕ್ಷದ ಸಾಧನೆಗಳ ಪರಿಚಯ ಮಾಡಿಕೊಡಲಾಗುತ್ತಿದೆ. (ಏಜೆನ್ಸೀಸ್​)

    ಮಮತಾ ಬ್ಯಾನರ್ಜಿಯವರನ್ನು ರಾಜಕೀಯವಾಗಿ ಮುಗಿಸಿಬಿಡುತ್ತೇವೆ ಎಂದ ಪ್ರಹ್ಲಾದ್​ ಜೋಶಿ

    ತಮಿಳುನಾಡಿಗೆ ಅಮಿತ್​ ಷಾ ಭೇಟಿ ಕೊಡುತ್ತಿದ್ದಂತೆಯೇ ಬಿಜೆಪಿ ಸೇರಲಾರಂಭಿಸಿದ ನಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts