More

    ಕಟ್ಟಕಡೆಯ ರೈತರಿಗೆ ತಲುಪುತ್ತಿಲ್ಲ ನಾಲೆ ನೀರು

    ಭದ್ರಾವತಿ: ಗೊಂಽ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಸರ್ಕಾರ ಹಾಗೂ ನೀರಾವರಿ ಇಲಾಖೆ ಅಽಕಾರಿಗಳು ಸಹ ನಮಗೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾ.13ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಽಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ ಹೇಳಿದರು.
    ಗೊಂಽ ನಾಲಾ ಆಧುನೀಕರಣ ಕಾಮಗಾರಿಗೂ ಮುನ್ನ ನಾಲಾ ವ್ಯಾಪ್ತಿಯ ಕಟ್ಟಕಡೆಯ ರೈತರಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿತ್ತು. ಆದರೆ ಆಧುನೀಕರಣದ ನಂತರ ನೀರಿನ ಹರಿವು ಕಡಿಮೆಯಾಗಿದೆ. ಇದೀಗ 12ರಿಂದ 13 ಕಂತುಗಳ ಪ್ರಕಾರ ನಾಲೆಗಳಲ್ಲಿ ನೀರು ಹರಿಸಲು ಮುಂದಾಗಿರುವ ನೀರಾವರಿ ಇಲಾಖೆ ಇಂಜಿನಿಯರ್‌ಗಳು ನಾಲೆಗೆ ಹರಿಸುತ್ತಿರುವ ನೀರು ಗೊಂಽ ನಾಲೆಯ ಕಟ್ಟಕಡೆಯ ರೈತರಿಗೆ ತಲುಪುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಬಿಆರ್‌ಪಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಪ್ರತಿಭಟನೆ ನಡೆಸಿದರೆ ಅಲ್ಲಿನ ಅಽಕಾರಿಗಳು ನಮಗೂ ಅದಕ್ಕೂ ಸಂಬAಧವಿಲ್ಲ ಎನ್ನುತ್ತಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಗೊಂಽ ನಾಲೆಯಲ್ಲಿ ಹರಿಯುವ ನೀರು ನೇರವಾಗಿ ಹರಿಯದೆ ಎಲ್ಲ ಕೆರೆಗಳಿಗೂ ತುಂಬಿ ಹರಿಯುತ್ತಿದೆ. ಕೆಲವು ಕೆರೆಯ ತಡೆಗೋಡೆಗಳು ಒಡೆದುಹೋಗಿದ್ದು, ಅದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಸೋರಿಕೆಯಾಗುತ್ತಿರುವ ನೀರು ಭದ್ರಾ ನದಿ ಸೇರುತ್ತಿದೆ. ತಡೆಗೋಡೆ ಸರಿಪಡಿಸಿ ಪೋಲಾಗುತ್ತಿರುವ ನೀರು ತಪ್ಪಿಸಿ ಎಂದು ಇಂಜಿನಿಯರ್‌ಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನಾಲಾ ವ್ಯಾಪ್ತಿಯ ರೈತರ ಬದುಕು ಹಾಗೂ ಬೆಳೆಗಳಿಗೆ ಹಾನಿಯಾದಲ್ಲಿ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಽಕಾರಿಗಳೇ ಕಾರಣವಾಗಿದ್ದು ನಷ್ಟ ಭರಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಡಿ.ವಿ.ವೀರೇಶ್, ಎಚ್.ಪಿ.ಹಿರಿಯಣ್ಣಯ್ಯ, ಎಚ್.ಎಸ್.ಮಂಜುನಾಥ್, ಯಲ್ಲಪ್ಪ, ಕೃಷ್ಣಮೂರ್ತಿ, ರಾಮಕೃಷ್ಣಬೆಸ್ತ, ಬಸವರಾಜ್, ಚಂದ್ರು ಇತರರಿದ್ದರು.

    ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಮಾ.೧೩ರಂದು ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದರಲ್ಲಿ ನಾಲಾ ವ್ಯಾಪ್ತಿಯ ದಾಸರಕಲ್ಲಹಳ್ಳಿ, ಸಿದ್ದಲೀಪುರ, ಡಣಾಯಕಪುರ, ಹೊಸಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರು ಬೆಳಗ್ಗೆ ೯.೩೦ಕ್ಕೆ ಹೊಳೆಹೊನ್ನೂರು ರೈಸ್‌ಮಿಲ್ ಆವರಣದಲ್ಲಿ ಸೇರಲಿದ್ದಾರೆ. ನಂತರ ಬೈಕ್ ರ‍್ಯಾಲಿ ಮೂಲಕ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
    | ಯಶವಂತರಾವ್ ಘೋರ್ಪಡೆ
    ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts