More

    Fact Check: ಶಾಹೀನ್​ಬಾಗ್​ ಪ್ರತಿಭಟನೆಗೂ, ಕಾಂಡೊಮ್​ ಫೋಟೋಕ್ಕೂ ಏನು ಸಂಬಂಧ? ವೈರಲ್​ ಆಗಿದ್ದು ಸತ್ಯವಲ್ಲ…

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್​ ಬಾಗ್​​ನಲ್ಲಿ ಕಳೆದ ಎರಡು ತಿಂಗಳಿಂದಲೂ ಪ್ರತಿಭಟನೆ ನಡೆಯುತ್ತಲೇ ಇದೆ.

    ಈ ಮಧ್ಯೆ ಫೆ.18ರಿಂದ ಮೋರಿ ಬಳಿ ರಾಶಿಗಟ್ಟಲೆ ಬಿದ್ದಿರುವ ಕಾಂಡೊಮ್​ಗಳ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿಭಟನೆಗಳೂ…ಈ ಕಾಂಡೊಮ್ ಫೋಟೋಕ್ಕೂ ಏನು ಸಂಬಂಧ ಎಂದು ಕೇಳಬಹುದು. ಆದರೆ ಇದೆರಡೂ ವಿಷಯಗಳನ್ನೊಳಗೊಂಡ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್​ ಆಗುತ್ತಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಶಾಹೀನ್​ ಬಾಗ್​ನ ಹಿಂಭಾಗದಲ್ಲಿರುವ ಚರಂಡಿ ಸ್ವಚ್ಛಗೊಳಿಸಲು ಹೋದಾಗ ಪುರಸಭೆ ಕಾರ್ಮಿಕರಿಗೆ ಹೀಗೆ ನೆಲದ ಮೇಲೆ ಕಾಂಡೊಮ್​ಗಳು ಬಿದ್ದಿರುವುದು ಕಾಣಿಸಿದೆ ಎಂಬ ಕ್ಯಾಪ್ಷನ್​ನೊಂದಿಗೆ ವಾಟ್ಸ್​ಆ್ಯಪ್​ ಫೇಸ್​ಬುಕ್​ ನಲ್ಲಿ ಹರಿಬಿಡಲಾಗಿತ್ತು. ಪ್ರಭು ಸಾಗರ್ ಎಂಬುವರು ಪೋಸ್ಟ್ ಮಾಡಿದ್ದ ಫೋಟೋ 1600ಕ್ಕೂ ಅಧಿಕ ಬಾರಿ ಶೇರ್​ ಕೂಡ ಆಗಿದೆ. ಟ್ವಿಟರ್​ಗಳಲ್ಲಿ ಕೂಡ ವೈರಲ್ ಆಗಿದೆ.

    ಆದರೆ ಅದು ಸತ್ಯವಲ್ಲ ಎಂಬುದು ಬೂಮ್​ ತಂಡದ ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದೆ. ಫೋಟೋವನ್ನು ರಿವರ್ಸ್​ ಇಮೇಜ್​ ಸರ್ಚ್​ಗೆ ಒಳಪಡಿಸಿದಾಗ ಇದೊಂದು ಹಳೇ ಫೋಟೋ ಮತ್ತು ಶಾಹೀನ್​ ಬಾಗ್​ನದ್ದಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ.

    2016ರಲ್ಲಿ ವಿಯೆಟ್ನಾಂಮೀಸ್​ ವೆಬ್​ಸೈಟ್​ವೊಂದರಲ್ಲಿ ಪ್ರಕಟವಾಗಿದ್ದ ಲೇಖನಕ್ಕೆ ಬಳಸಲಾಗಿದ್ದ ಫೋಟೋ. ಅದರ ಮೇಲೆ ವಾಟರ್​ ಮಾರ್ಕ್​ ಕೂಡ ಇದೆ. ಅಲ್ಲಿನ ಯಾವುದೋ ವಸತಿ ನಿಲಯದಲ್ಲಿ ವಾಸಿಸುವ ಪುರುಷ ವಿದ್ಯಾರ್ಥಿಗಳ ಬಗ್ಗೆ ಬರೆದ ಲೇಖನ ಎಂಬುದು ರಿವರ್ಸ್​ ಇಮೇಜ್​ ಸರ್ಚ್​ ವೇಳೆ ಗೊತ್ತಾಗಿದೆ. (ಏಜೆನ್ಸೀಸ್​)

    Fact Check: ಶಾಹೀನ್​ಬಾಗ್​ ಪ್ರತಿಭಟನೆಗೂ, ಕಾಂಡೊಮ್​ ಫೋಟೋಕ್ಕೂ ಏನು ಸಂಬಂಧ? ವೈರಲ್​ ಆಗಿದ್ದು ಸತ್ಯವಲ್ಲ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts