More

    ವೃದ್ಧೆ ಜೀವ ಉಳಿಸಿದ ಪಿಎಚ್​ಸಿ

    ವೃದ್ಧೆ ಜೀವ ಉಳಿಸಿದ ಪಿಎಚ್​ಸಿ

    ಗಜೇಂದ್ರಗಡ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾದ ರೋಗಿಗೆ ರಕ್ತ ವರ್ಗಾವಣೆ ಮಾಡುವ ಅವಶ್ಯಕತೆ ಕಂಡುಬಂದರೆ ರೋಗಿಯನ್ನು ತಾಲೂಕು/ಜಿಲ್ಲಾ ಮಟ್ಟದ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ, ತಾಲೂಕಿನ ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೃದ್ಧೆಯೊಬ್ಬಳಿಗೆ ರಕ್ತ ವರ್ಗಾವಣೆ ಮಾಡುವ ಮೂಲಕ ವೈದ್ಯರು ಸೈ ಎನಿಸಿಕೊಂಡಿದ್ದಾರೆ.
    ಹೀಗೆ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡಿ, ರೋಗಿಗೆ ಚೈತನ್ಯ ನೀಡಿರುವುದು ಅಪರೂಪದ ಪ್ರಕರಣವಾಗಿದೆ.
    ರಕ್ತ ವರ್ಗಾವಣೆ ಅಥವಾ ಇನ್ನಾವುದೋ ತುರ್ತು ಚಿಕಿತ್ಸೆಗೆ ತುರ್ತು ನಿಗಾ ಘಟಕ ಅವಶ್ಯ. ಸೂಡಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ ಇರುವುದರಿಂದ ರಕ್ತ ವರ್ಗಾವಣೆ ಮಾಡಿ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಮೂಲಕ, ಆತಂಕದಲ್ಲಿದ್ದ ವೃದ್ಧೆಯ ಕುಟುಂಬದವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
    ಮಾ.13ರಂದು ಸೂಡಿ ಗ್ರಾಮದ ಫಕೀರಾಬಿ ತಹಶೀಲ್ದಾರ (86) ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದರು. ರಕ್ತದ ಪ್ರಮಾಣ ಕಡಿಮೆ ಇರುವುದು ಪರೀಕ್ಷೆ ಮೂಲಕ ದೃಢಪಟ್ಟಿತ್ತು. ರಕ್ತ ವರ್ಗಾವಣೆ ಅನಿವಾರ್ಯ ಎಂಬುದು ತಿಳಿಯುತ್ತಿದ್ದಂತೆ ವೈದ್ಯಾಧಿಕಾರಿ ಡಾ. ಶರಣು ಗಾಣಿಗೇರ ಕಾರ್ಯಪ್ರವೃತ್ತರಾದರು. ಸಕಾಲಕ್ಕೆ ಗದಗ ರಕ್ತ ಭಂಡಾರದಿಂದ ಒಂದು ಯೂನಿಟ್ ರಕ್ತ ತರಿಸಿ ನಿಗದಿತ ಅವಧಿಯಲ್ಲಿ ರಕ್ತ ವರ್ಗಾವಣೆ ಮಾಡಿ ವೃದ್ಧೆಯ ಪ್ರಾಣ ಉಳಿಸಿದ್ದಾರೆ. ಸೇವೆ ಮತ್ತಿತರ ಚಟುವಟಿಕೆಯಿಂದಾಗಿ ಈಗಾಗಲೇ ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಎನ್​ಕೆಯುಎಸ್ ಪ್ರಶಸ್ತಿ ಪಡೆದಿದೆ. ಅಲ್ಲದೆ ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳು ಲಭಿಸಿದೆ.


    ಬೇರೊಂದು ಆಸ್ಪತ್ರೆಗೆ ತೆರಳಲು ವೃದ್ಧೆಗೆ ಬಹಳ ಕಷ್ಟ ಆಗುತ್ತಿತ್ತು. ಅನಗತ್ಯ ವಿಳಂಬವನ್ನೂ ತಪ್ಪಿಸಬೇಕಿತ್ತು. ಹೀಗಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ನಿಗಾ ಘಟಕ ಇರುವುದರಿಂದ ನಾವೇ ರಕ್ತ ವರ್ಗಾವಣೆ ಮಾಡಿದ್ದೇವೆ.
    | ಡಾ. ಶರಣು ಗಾಣಿಗೇರ
    ಪಿಎಚ್​ಸಿ ಆಡಳಿತ ವೈದ್ಯಾಧಿಕಾರಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts