More

    ಖೈದಿಗೆ ತೀವ್ರ ಹೊಟ್ಟೆನೋವು; ಎಂಡೋಸ್ಕೋಪಿ ಮೂಲಕ ಶೇವಿಂಗ್ ಬ್ಲೇಡ್ , ಉಗುರು, ರಬ್ಬರನ್ನು ಹೊರ ತೆಗೆದ ವೈದ್ಯರು

    ಹೈದರಾಬಾದ್: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಚಂಚಲಗುಡ ಜೈಲು ಖೈದಿಯೊಬ್ಬನ ಹೊಟ್ಟೆಯಿಂದ ಉಸ್ಮಾನಿಯಾ ಜನರಲ್ ಆಸ್ಪತ್ರೆ (ಒಜಿಎಚ್) ವೈದ್ಯರು ಮೊಳೆಗಳು, ರಬ್ಬರ್ ಕ್ಯಾಪ್​ಗಳು ಮತ್ತು ಗಾಂಜಾ ಪ್ಯಾಕೆಟ್‌ಗಳು, ಎರಡು ಪ್ಲಾಸ್ಟಿಕ್ ಕವರ್ ಮಾಡಿದ ಪ್ಯಾಕೆಟ್‌ಗಳನ್ನು ಎಂಡೋಸ್ಕೋಪಿ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

    ಮೊಹಮ್ಮದ್ ಸೊಹೈಲ್ (21) ಎಂಬ ಕೈದಿ ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ನೋವು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕೂಗಾಡುತ್ತಿದ್ದನು. ಜೈಲಿನಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲ ಸಿಗದ ಕಾರಣ ಬೆಂಗಾವಲು ಪೊಲೀಸರು ಇದೇ 8ರಂದು ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷೆ ಮಾಡಿದ ವೈದ್ಯರು ಬೆಚ್ಚಿಬಿದ್ದರು. ಎಕ್ಸ್ ರೇ ಪರೀಕ್ಷೆಯಲ್ಲಿ ಹೊಟ್ಟೆಯಲ್ಲಿ ಶೇವಿಂಗ್ ಬ್ಲೇಡ್ ಗಳು, ಎರಡು ಮೊಳೆಗಳು, ಎರಡು ಸಣ್ಣ ರಬ್ಬರ್ ಬಾಲ್ ಗಳು, ಎರಡು ಪ್ಲಾಸ್ಟಿಕ್ ಪ್ಯಾಕೆಟ್ ಗಳು ಸೇರಿದಂತೆ ಸಣ್ಣಪುಟ್ಟ ವಸ್ತುಗಳು ಇರುವುದು ಪತ್ತೆಯಾಗಿದೆ. ಗಾಂಜಾ ಇರುವ ಶಂಕೆಯ ಮೇರೆಗೆ ಪ್ಲಾಸ್ಟಿಕ್ ಪ್ಯಾಕೆಟ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

    ಗ್ಯಾಸ್ಟ್ರೋಎಂಟರಾಲಜಿ ಡಾ.ಬಿ.ರಮೇಶಕುಮಾರ್ ಎಂಡೋಸ್ಕೋಪಿ ಮೂಲಕ ಖೈದಿ ಹೊಟ್ಟೆ ಒಳಗೆ ಇರುವ ಈ ವಸ್ತುಗಳನ್ನು ಯಶಸ್ವಿಯಾಗಿ ಹೊರತೆಗೆದರು. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆಪರೇಷನ್ ಮಾಡದೇ ಎಂಡೋಸ್ಕೋಪಿ ಮೂಲಕ ರೋಗಿಯ ಜೀವ ಉಳಿಸಿದ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಎಚ್ ವಿಡಿ ಡಾ.ಬಿ.ರಮೇಶ್ ತಂಡ.

    ಖೈದಿ ಯಾವಾಗ ಮತ್ತು ಏಕೆ ವಸ್ತುಗಳನ್ನು ನುಂಗಿದನು ಎಂಬುದನ್ನು ಬಹಿರಂಗಪಡಿಸುವುದಿಲ್ಲ. ರೋಗಿಯು ಚೇತರಿಸಿಕೊಂಡ ನಂತರ, ಆತನಿಗೆ ಯಾವುದೇ ಮಾನಸಿಕ ಸಮಸ್ಯೆಗಳಿವೆಯೇ ಎಂದು ವಿಚಾರಿಸುತ್ತೇವೆಂದು ಪೊಲೀಸ್ ಅಧಿಕಾರಿತಗಳು ತಿಳಿಸಿದ್ದಾರೆ.

    ವಿಜಯ್ ದೇವರಕೊಂಡ ಜತೆ ಮದುವೆ ಆಗ್ತಿನೆಂದ ರಶ್ಮಿಕಾಗೆ ಕುಟುಂಬಸ್ಥರು ಹೇಳಿದ್ದೇನು ಗೊತ್ತಾ?

    ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ನಟ ಅಬ್ಬಾಸ್ ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts