More

    ಸ್ವಾರ್ಥ ಸಾಧನೆ, ರಾಜಕೀಯಕ್ಕಾಗಿ ಸಂಘಟನೆ ಬಳಕೆಯಾಗದಿರಲಿ

    ಶ್ರೀರಂಗಪಟ್ಟಣ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಜನರಿಗೆ ನೀಡುವ ಸೌಲಭ್ಯ ಅರ್ಹರಿಗೆ ತಲುಪಬೇಕಾದರೆ ಸಂಘಟನೆಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಡಾ.ಬಾಬು ಜಗಜೀವನರಾಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಅರಕೆರೆ ಸಿದ್ದರಾಜು ಹೇಳಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ್ ಜಿಲ್ಲಾ ಜನಜಾಗೃತಿ ಒಕ್ಕೂಟದ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕಗೊಳಿಸಿ ಮಾತನಾಡಿದರು.

    ಸಂಘಟನೆಗಳನ್ನು ಕೆಲವರು ಸ್ವಾರ್ಥ ಸಾಧನೆ ಹಾಗೂ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಾರೆ. ಅದರ ಬದಲಾಗಿ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿ, ಜನರ ಆರ್ಥಿಕ ಅಭ್ಯುದಯಕ್ಕೆ ಒಗ್ಗಟಿನಿಂದ ಸಂಘಟನೆ ಶ್ರಮಿಸಬೇಕು. ಕಾಂಗ್ರೆಸ್ ಸರ್ಕಾರ ಹಲವು ಯೋಜನೆಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಜಾರಿಗೊಳಿಸಿದ್ದು, ಎಡಗೈ ಸಮುದಾಯದವರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

    ಮುಖಂಡ ಪಾಪಯ್ಯ ಮಾತನಾಡಿದರು. ಇದಕ್ಕೂ ಮೊದಲು ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದರಾಜು ನೇತೃತ್ವದಲ್ಲಿ ಒಕ್ಕೂಟದ ಗೌರವ ಅಧ್ಯಕ್ಷರಾಗಿ ಕೆ.ಟಿ.ರಂಗಯ್ಯ, ತಾಲೂಕಿನ ನೂತನ ಅಧ್ಯಕ್ಷರಾಗಿ ಕೊಡಿಯಾಲ ಆಟೋ ಶಂಕರ್, ಹಿರಿಯ ಉಪಾಧ್ಯಕ್ಷರಾಗಿ ಆಲಗೂಡು ಸಿದ್ದು, ಉಪಾಧ್ಯಕ್ಷರಾಗಿ ಅಲ್ಲಾಪಟ್ಟಣ ಶ್ರೀಕಂಠು ಹಾಗೂ ಮೋಹನ್ ಕುಮಾರ್ ನೀಲನಕೊಪ್ಪಲು, ಕಾರ್ಯದರ್ಶಿಯಾಗಿ ಶಿವಶಂಕರ್ ಬಿದರಹಳ್ಳಿಹುಂಡಿ, ಖಜಾಂಚಿ ರವಿಕುಮಾರ್ ಚಂದಗಾಲು ಹೊಸೂರು, ಸಂಚಾಲಕರಾಗಿ ಸೋಮೇಶ್ ಹೊಸಹಳ್ಳಿ ಮತ್ತು ಗಂಜಾಂ ಸಿದ್ದರಾಜು, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುಮಿತ್ರಾ ಆಲಗೂಡು, ಉಪಾಧ್ಯಕ್ಷೆಯಾಗಿ ಶಾಂತಮ್ಮ ನೆಲಮನೆ ಹಾಗೂ ಕಾರ್ಯದರ್ಶಿಯಾಗಿ ಪ್ರೇಮಾ ಆಲಗೂಡು ಅವರನ್ನು ಸೇರಿದಂತೆ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ನಂಜುಂಡ ಮೌರ್ಯ, ಗೋವಿಂದರಾಜು, ಮಹದೇವಪುರ ಸಿದ್ದರಾಜು, ಕೊಡಿಯಾಲ ಸ್ವಾಮಿ ಬಿದರಹಳ್ಳಿಹುಂಡಿ ನಿಂಗರಾಜು, ಎಲೆಚಾಕನಹಳ್ಳಿ ಗವಿಯಪ್ಪ, ನೀಲನಕೊಪ್ಪಲು ಶಿವಣ್ಣ , ಲಕ್ಷ್ಮಣ, ಜಗದೀಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts