More

    ಸಾರ್ವಜನಿಕರಿಂದ ಅಧಿಕಾರಿಗಳ ತರಾಟೆ

    ರಬಕವಿ/ಬನಹಟ್ಟಿ: ತಾಲೂಕಿನ ಮಹತ್ತರ ಯೋಜನೆಯಾದ ರಬಕವಿ-ಬನಹಟ್ಟಿ-ಅಥಣಿಯ ಮಹಿಷವಾಡಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ದಿಢೀರ್ ವೀಕ್ಷಣೆಗೆ ಆಗಮಿಸಿದ ಕೆಆರ್‌ಡಿಸಿಎಲ್‌ನ ಯೋಜನಾಧಿಕಾರಿ ವಸಂತ ನಾಯಕ ಹಾಗೂ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

    8 ವರ್ಷಗಳಿಂದ ನಡೆಯುತ್ತಿರುವ 50 ಕೋಟಿ ರೂಗಳ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಕ್ತಾಯಗೊಳಿಸಬೇಕಿತ್ತು. ಸರ್ಕಾರದ ನಿರ್ಲಕ್ಷೃ ಹಾಗೂ ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

    ನದಿ ನೀರಿನಲ್ಲಿ ಉನ್ನತ ಕಾಮಗಾರಿ ಕೈಗೆತ್ತಿಕೊಳ್ಳುವ ಬದಲು ಮಾನವ ಸಂಪನ್ಮೂಲ ಬಳಕೆಯಿಂದ ತೀರಾ ಕಡಿಮೆಮಟ್ಟದ ಯೋಜನೆ ರೂಪಿಸಿರುವುದೇ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    ಬೇಸಿಗೆ ಸಂದರ್ಭದಲ್ಲಿ ಇಡೀ ನದಿಯೊಳಗಿನ ಕಾಮಗಾರಿ ಮುಕ್ತಾಯ ಕಾಣಬೇಕಿತ್ತು. ಇಂತಹ ಆರೇಳು ಬೇಸಿಗೆಗಳು ಮುಗಿದು ಹೋಗಿವೆ. ನದಿಯೊಳಗೆ ಒಂದು ಹನಿಯೂ ನೀರಿಲ್ಲ. ಇಷ್ಟಾದರೂ ಕಾಮಗಾರಿ ನಡೆಸದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಜನತೆ ಆಕ್ರೋಷಗೊಂಡರಲ್ಲದೆ, ನದಿಯೊಳಗಿನ ಕಾಮಗಾರಿ ಮುಕ್ತಾಯಗೊಳಿಸಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

    ಸಾರ್ವಜನಿಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಕೆಆರ್‌ಡಿಸಿಎಲ್ ಯೋಜನಾಧಿಕಾರಿ ನಾಯಕ, ಇದೇ ವಾರದಿಂದ ಕಾಮಗಾರಿಯ ವೇಗ ಹೆಚ್ಚಿಸಲಾಗುವುದು, ಸರ್ಕಾರದ ಮಟ್ಟದಲ್ಲಾಗಲಿ ಇನ್ನಾವುದೇ ತೊಂದರೆಗಳಿದ್ದರೆ ಕೂಡಲೆ ಸರಿಪಡಿಸಿ ಶೀಘ್ರ ಈ ಬೇಸಿಗೆಯಲ್ಲಿ ನದಿಪಾತ್ರದಲ್ಲಿನ ಪಿಲ್ಲರ ಅಳವಡಿಕೆಯ ಕಾಮಗಾರಿಯನ್ನು ಸಂಪೂರ್ಣ ಮುಗಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ, ವಿಳಂಬನೀತಿ ಅನುಸರಿಸಿದರೆ ಗುತ್ತಿಗೆದಾರರನ್ನು ಕೂಡ ಬದಲಿಸಿ ಹೊಸ ಗುತ್ತಿಗೆದಾರನಿಗೆ ಕಾಮಗಾರಿ ನೀಡಲಾಗುವುದೆಂದು ವಿಶ್ವಾಸ ನೀಡಿದರು.

    ಸೇತುವೆ ನಿರ್ಮಾಣ ಸಮಿತಿ ಅಧ್ಯಕ್ಷ ಡಾ. ರವಿ ಜಮಖಂಡಿ, ಗಣಪತರಾವ್ ಹಜಾರೆ, ರಾಮಣ್ಣ ಹುಲಕುಂದ, ನಂದು ತೇಲಿ, ರವಿ ಗಡಾದ, ಆನಂದ ಜುಗಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts