More

    ಅಪರಾಧಿಗೆ ಜೀವಾವಧಿ ಶಿಕ್ಷೆ

    ವಿಜಯಪುರ : ಪತ್ನಿಯ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ರಾಮನಾಯಕ ಅಪರಾಧಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿಯ ಶಿವರಾಜ ಬಸವಂತಪ್ಪ ಬಡಿಗೇರ ಎಂಬಾತನೇ ಶಿಕ್ಷೆಗೆ ಗುರಿಯಾದ ಅತ್ಯಾಚಾರಿ.

    ಘಟನೆಯ ಹಿನ್ನೆಲೆ

    ಬೊಮ್ಮನಹಳ್ಳಿ ನಿವಾಸಿ ಲಕ್ಷ್ಮೀಹಟ್ಟಿ ಎಂಬುವವರ ಎರಡನೇ ಮಗಳನ್ನು ಶಿವರಾಜ ಬಡಿಗೇರ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಟ್ಯಾಕ್ಸಿ ಚಾಲಕನಾಗಿದ್ದ ಶಿವರಾಜ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಲಕ್ಷ್ಮೀಹಟ್ಟಿ ಅವರ ಕೊನೆ ಇಬ್ಬರು ಹೆಣ್ಣು ಮಕ್ಕಳು ಅಪ್ರಾಪ್ತರು. ಇನ್ನೂ ಶಾಲೆಗೆ ಹೋಗುತ್ತಿದ್ದರು. ಅವರು ಬೆಂಗಳೂರಿಗೆ ಬಂದು, ಒಬ್ಬಳು ಶಿವಾನಂದ ದಂಪತಿ ಮನೆಯಲ್ಲಿದ್ದರೆ, ಮತ್ತೊಬ್ಬಳು ಮಂಜುನಾಥ್ ಎಂಬುವವರ ಮನೆಯಲ್ಲಿದ್ದರು. 2020 ಏಪ್ರಿಲ್ 18ರಂದು ಶಿವಾನಂದ ಪತ್ನಿ ಮಾರ್ಕೆಟ್‌ಗೆ ತೆರಳಿದ ಸಂದರ್ಭ ಬಳಸಿಕೊಂಡು ಮನೆಯಲ್ಲಿದ್ದ ಪತ್ನಿಯ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿ, ಯಾರಿಗಾದರೂ ವಿಷಯ ತಿಳಿಸಿದರೆ ನಿಮ್ಮ ಅಕ್ಕ, ತಂದೆ-ತಾಯಿಯನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಹೀಗಾಗಿ ವಿಷಯ ಬೆಳಕಿಗೆ ಬಂದಿರಲಿಲ್ಲ.

    ಮುಂದೆ ಕರೊನಾ ಉಲ್ಬಣವಾದಾಗ ಶಿವರಾಜ ದಂಪತಿ ಬೊಮ್ಮನಹಳ್ಳಿಗೆ ಹಿಂತಿರುಗಿದ್ದರು. ಆ ಸಂದರ್ಭದಲ್ಲಿ ಮತ್ತೆ ಬಾಲಕಿ ಮೇಲೆ ಶಿವರಾಜ ಅತ್ಯಾಚಾರಕ್ಕೆ ಯತ್ನಿಸಿದ. ಈ ವಿಷಯ ಮನೆಯರಿಗೆ ಗೊತ್ತಾಗಿ ಆತನ ವಿರುದ್ಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಶಿವರಾಜ ಬಡಿಗೇರಿಗೆ ಫೋಕ್ಸೋ ಕಾಯ್ದೆಯಡಿ 20 ವರ್ಷಗಳ ಜೀವಾವಧಿ ಶಿಕ್ಷೆ, 26 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ವಿ.ಜೆ. ಹಗರಗುಂಡ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts