More

    ಏರಿಕೆಯಾಗದ ಮೆಟ್ರೋ ಪ್ರಯಾಣಿಕರ ಸಂಖ್ಯೆ

    ಬೆಂಗಳೂರು: ಕರೊನಾ ಸೋಂಕಿನಿಂದಾಗಿ ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗುವುದರ ಜತೆಗೆ ಆದಾಯದಲ್ಲೂ ಕುಸಿತಕಂಡಿದೆ.
    ನಗರ ಸಾರಿಗೆ ವ್ಯವಸ್ಥೆಯ ಪ್ರಮುಖ ಮೂಲವಾದ ನಮ್ಮ ಮೆಟ್ರೋ ರೈಲಿಗೆ ಕರೊನಾ ಸೋಂಕಿನ ಕಾರಣಗಳಿಂದಾಗಿ ಪ್ರಯಾಣಿಕರ ಸಂಖ್ಯೆ ಕುಸಿತ ಉಂಟಾಗಿದೆ. ಕರೊನಾ ಪೂರ್ವದಲ್ಲಿನ ಪ್ರಯಾಣಿಕರು, ಆದಾಯಕ್ಕಿಂತ ಶೇ. 80 ಕಡಿಮೆಯಾಗಿದ್ದು, ಬಿಎಂಆರ್​ಸಿಎಲ್​ ಅನ್ನು ನಷ್ಟದತ್ತ ದೂಡುವಂತಾಗಿದೆ. ಅಲ್ಲದೆ, ಮೆಟ್ರೋ ರೈಲು ಸೇವೆಯ ಮಾರ್ಗಸೂಚಿ ಪ್ರಕಾರ ಸ್ಮಾರ್ಟ್​ಕಾರ್ಡ್​ ಮೂಲಕ ಪ್ರಯಾಣಿಕರ ಸಂಚಾರಕ್ಕಷ್ಟೇ ಅವಕಾಶವಿರುವ ಕಾರಣ, ಜನರು ಮೆಟ್ರೋದತ್ತ ಬರುವುದು ಕಡಿಮೆಯಾಗಿದೆ. ಇದು ಪ್ರಯಾಣಿಕರು ಮತ್ತು ಆದಾಯ ಇಳಿಕೆಗೆ ಕಾರಣವಾಗುವಂತಾಗಿದೆ.
    33 ಕೋಟಿ ರೂ.ಗಳಿಂದ 5 ಕೋಟಿಗೆ:
    ಕರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕಿಂತ ಹಿಂದಿನ ತಿಂಗಳಾದ ೆಬ್ರವರಿಯಲ್ಲಿ 1.18 ಕೋಟಿ ಜನರು ಮೆಟ್ರೋ ರೈಲಿನಲ್ಲಿ ಸಂಚರಿಸಿ, 33.54 ಕೋಟಿ ರೂ. ಆದಾಯಬಂದಿತ್ತು. ಅದೇ ನವೆಂಬರ್​ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ 19.49 ಲಕ್ಷಕ್ಕಿಳಿದಿದ್ದು, ಆದಾಯ 4.93 ಕೋಟಿ ರೂ. ಸಂಗ್ರಹವಾಗಿದೆ.
    ಲಕ್ಷ ಮೀರದ ಪ್ರಯಾಣಿಕರು:
    ಈ ಹಿಂದೆ ಒಂದು ದಿನಕ್ಕೆ ಸರಾಸರಿ 4.5 ಲಕ್ಷಕ್ಕೂ ಹೆಚ್ಚನ ಜನರು ಮೆಟ್ರೋ ರೈಲು ಬಳಸುತ್ತಿದ್ದರು. ನವೆಂಬರ್​ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಒಂದು ದಿನಕ್ಕೆ 1 ಲಕ್ಷದ ಹತ್ತಿರಕ್ಕೂ ಹೋಗಿಲ್ಲ. ನವೆಂಬರ್​ ತಿಂಗಳ 30ನೇ ತಾರೀಖಿನಂದು 84,369 ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದೇ, ಆ ತಿಂಗಳಲ್ಲಿ ಒಂದು ದಿನಕ್ಕೆ ಅತಿಹೆಚ್ಚು ಜನರು ಪ್ರಯಾಣಿಸಿದ ಸಂಖ್ಯೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts