More

    ಸ್ಥಳೀಯ ಕಾರ್ಮಿಕರ ಬಳಕೆ ಅವಶ್ಯ, ಶಾಸಕ ಶರತ್‌ಬಚ್ಚೇಗೌಡ ಸೂಚನೆ, ಕಾರ್ಖಾನೆ ಮಾಲೀಕರ ಸಭೆ

    ಹೊಸಕೋಟೆ: ಕಾರ್ಖಾನೆ ಪುನರಾರಂಭಕ್ಕೆ ಶೇ.25ರಷ್ಟು ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಲಿದ್ದು, ಕರೊನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕಾರ್ಖಾನೆ ಮಾಲೀಕರು ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಕಾರ್ಖಾನೆ ಆರಂಭಿಸುವ ಬದಲಿಗೆ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಸೂಕ್ತ ಎಂದರು. ಈಗಾಗಲೇ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ ಸುಮಾರು 80 ಕಾರ್ಮಿಕರು ಕಾರ್ಖಾನೆಯ ಆಡಳಿತ ಮಂಡಳಿ ಆಹ್ವಾನದ ಮೇರೆಗೆ ಕೆಲಸಕ್ಕೆ ಹಾಜರಾಗಲು ಸಿದ್ಧರಿದ್ದಾರೆ ಎನ್ನಲಾಗಿದೆ. ಇಂತಹ ವಲಸಿಗರಿಂದ ತಾಲೂಕಿನಲ್ಲಿ ಮತ್ತೆ ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು ಇದನ್ನು ತಡೆಗಟ್ಟಲು ಕಾರ್ಖಾನೆಯ ಮಾಲೀಕರು ಹಾಗೂ ಆಡಳಿತ ಮಂಡಳಿ ಸಹಕರಿಸಬೇಕು ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ ಮಂಜುನಾಥ್, ಬೇರೆ ಭಾಗದ ವಲಸೆ ಕಾರ್ಮಿಕರು ತಾಲೂಕಿಗೆ ಬಂದು ವಾಸ್ತವ್ಯ ಹೂಡಿದಲ್ಲಿ ಕೂಡಲೆ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು ಹಾಗೂ ವಲಸಿಗರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದರು.
    ತಹಸೀಲ್ದಾರ್ ಗೀತಾ, ಡಿವೈಎಸ್ ಪಿ ನಿಂಗಪ್ಪ ಬಸಪ್ಪ ಸಕ್ರಿ, ಜಿಲ್ಲಾ ಕಾರ್ಮಿಕ ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ನರಸಿಂಹ ಮೂರ್ತಿ, ನಗರಸಭೆ ಆಯುಕ್ತ ನಿಸಾರ್ ಅಹಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts