More

    ಶವ ಹೊರತೆಗೆಯಲು ಬತ್ತಿಸಲಾಗುತ್ತಿದೆ ಕೆರೆ

    ಮುಳಬಾಗಿಲು: ನಗರದಲ್ಲಿ ಜೂ. 7ರಂದು ಕೊಲೆಯಾಗಿದ್ದ ನಗರಸಭೆ ಸದಸ್ಯ ಜಗನ್​ ಮೋಹನರೆಡ್ಡಿ ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಎಂಟು ವರ್ಷದ ಹಿಂದೆ ನಡೆದ ಕೊಲೆ ರಹಸ್ಯವೊಂದು ಬಯಲಿಗೆ ಬಂದಿದೆ. ಆಗ ಹೂತಿಟ್ಟಿದ್ದ ಶವ ಹೊರತೆಗೆಯಲು ಕೆರೆಯಂಗಳದ ನೀರು ಖಾಲಿ ಮಾಡಲಾಗುತ್ತಿದೆ.


    ಜಗನ್​ ಮೋಹನರೆಡ್ಡಿ ಕೊಲೆ ಅವರ ಮನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊಲೆಯಲ್ಲಿ ಪ್ರಮುಖ ಆರೋಪಿಗಳಾದ ಜಗನ್ನಾಥ್​, ಧನಂಜಯ, ಮಹೇಶ್​, ಬಾಲಾಜಿ ಸಿಂಗ್​ ಸೇರಿ 6 ಮಂದಿ ಹಾಗೂ ಕೊಲೆಗೆ ಸಹಕರಿಸಿದ 8 ಮಂದಿ ಸೇರಿ ಒಟ್ಟು 14 ಮಂದಿಯನ್ನು ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ.


    ಕೊಲೆಗೆ ಸಹಕಾರ ನೀಡಿದ ಅಶ್ವಿನಿ, ರೋಹಿತ್​ ಕುಮಾರ್​, ಪ್ರಕಾಶ್​, ಸಂಗೀತಾ, ಜಯಲಕ್ಷ್ಮಿ, ನಾಗೇಶ್​ ಸಾವಿತ್ರಮ್ಮ ಮತ್ತೊಬ್ಬ ಆರೋಪಿ ಪ್ರಸಾದ್​ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
    ಜಗಮೋಹನ ರೆಡ್ಡಿ ಕೊಲೆ ಕೇಸ್​ ತನಿಖೆ ಸಮಯದಲ್ಲಿ 5 ವರ್ಷದ ಹಿಂದೆ ನಡೆದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕೊಲೆ ಕೇಸಿನಲ್ಲಿ ಪೊಲೀಸರು ವಿಚಾರಣೆಯಲ್ಲಿ 2015ರ ಏಪ್ರಿಲ್​ 1ರಂದು ಮುಳಬಾಗಿಲು ತಾಲೂಕಿನ ಲಿಂಗಾಪುರದ ರ್ನಿಜನ ಪ್ರದೇಶದ ಪೊದೆಯೊಂದರಲ್ಲಿ ಅಪರಿಚಿತ ಶವ ಸಿಕ್ಕಿತ್ತು. ಆ ಶವದ ಗುರುತು ಸಿಗದ ಹಿನ್ನೆಲೆಯಲ್ಲಿ ಡೀ ಕಂಪೋಸ್​ ಆಗಿದೆ ಎಂದು ಗ್ರಾಮಾಂತರ ಪೊಲೀಸರು ನಾಗನಕುಂಟೆ ಬಳಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಬಳಿಕ ನಗರದ ಗಣೇಶಪಾಳ್ಯದ 31 ವರ್ಷದ ರಮೇಶ್​ ಅಲಿಯಾಸ್​ ಸೆಂಟರ್​ ರಮೇಶ್​ ಎಂದು ತಿಳಿದು ಬಂದಿತು. 2015 ಏಪ್ರಿಲ್​ 28ರಂದು ಮುತ್ಯಾಲಪೇಟೆ ಗಂಗಮ್ಮನ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ವೇಳೆ ಮದ್ಯಪಾನ ಮಾಡಿದ್ದ ಪೇಂಟರ್​ ರಮೇಶ್​, ಡ್ಯಾನ್ಸ್​ ಮಾಡುತ್ತಿದ್ದ ವೇಳೆ ಜಗಮೋಹನರೆಡ್ಡಿ ಹಾಗೂ ಪೇಂಟರ್​ ರಮೇಶ್​ಗೆ ಜಗಳವಾಗಿದೆ. ಅದೇ ಜಿದ್ದಿನಲ್ಲಿ ತನ್ನ ಬಲಗೈ ಬಂಟನೊಬ್ಬನಿಗೆ ಜಗಮೋಹನರೆಡ್ಡಿ 2 ಸಲ ಸುಪಾರಿ ನೀಡಿ ರಮೇಶ್​ನನ್ನು ಕೊಲೆ ಮಾಡಿಸಿದ್ದ.


    ಪೇಂಟರ್​ ರಮೇಶ್​ ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ರಮೇಶ್​ ಕುಟುಂಬದವರು ಸಾಕಷ್ಟು ಬಾರಿ ಪೊಲೀಸ್​ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮಾಸ್ತಿ ಸರ್ಕಲ್​ ಇನ್​ಸ್ಪೆಕ್ಟರ್​ ವಸಂತ್​ಕುಮಾರ್​ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು ತನಿಖೆ ಕೈಗೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts