More

    ತುಂಬಿದ ವರದೆ ಒಡಲು, ರೈತರ ಹರ್ಷ

    ಸೊರಬ: ತಾಲೂಕಿನಲ್ಲಿ ಮಳೆ ಬಿರುಸುಗೊಂಡಿದ್ದು ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿ ಜೋಳದಗುಡ್ಡೆ ಮತ್ತು ಗುಂಜನೂರು, ಕಡಸೂರು ಗ್ರಾಮಗಳ ಜಮೀನುಗಳ ಮೇಲೆ ನೀರು ಹರಿಯುತ್ತಿದೆ.
    ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೂ 39 ಮಿಮೀ ಮಳೆಯಾದ ವರದಿಯಾಗಿದೆ. ವರದಾ ನದಿ ಪಾತ್ರದ ಕಡಸೂರು, ತಟ್ಟಿಗಂಡಿ, ಕಾರೆಹೊಂಡ ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರವಾಹ ಎದುರಾಗುತ್ತದೆ ಎಂದು ಕೂರಿಗೆ ಬಿತ್ತನೆ ಮಾಡಿದ ಭತ್ತದ ಗದ್ದೆಗಳಲ್ಲಿ ರಂಟೆ ಕೊಂಟೆ ಹೊಡೆಯಲು ರೈತರು ನೀರಿಲ್ಲದೆ ಪರದಾಡುವಂತಾಗಿತ್ತು. ಇದೀಗ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ರಂಟೆ ಹೊಡೆಯಲು ಮುಂದಾಗಿದ್ದಾರೆ. ಹಳೇ ಸೊರಬದ ಎರಡು ಕೆರೆಗಳು ಕೋಡಿ ಬಿದ್ದಿವೆ. ಅಲ್ಲದೆ ತಾಲೂಕಿನ ಹಲವು ಕೆರೆಗಳಿಗೆ ನೀರಿನ ಒಳಹರಿವು ಹೆಚ್ಚಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಗುರುವಾರಕ್ಕಿಂತ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇನ್ನು ಜುಲೈ ತಿಂಗಳಲ್ಲಿ ವಾಡಿಕೆ ಮಳೆ ಶೇ.20 ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ.
    ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಗದಿಗೆಮ್ಮ ಮಂಜಪ್ಪ ಎಂಬುವವರ ಮನೆಯ ಗೋಡೆ ಗಾಳಿ ಮಳೆಗೆ ಕುಸಿದಿದೆ. ಮನೆಯ ಮೇಲ್ಛಾವಣಿಯ ಹಂಚುಗಳಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಸುರೇಶ್ ಭಜಂತ್ರಿ ಹಾಗೂ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts