More

    ಎಂಟರ ಘಟ್ಟಕ್ಕೇರಿದ ಚಿರಾಗ್-ಸಾತ್ವಿಕ್: ಅಶ್ವಿನಿ-ತನಿಷಾ ಮುನ್ನಡೆ, ಶ್ರೀಕಾಂತ್ ಔಟ್

    ಕೌಲಾಲಂಪುರ: ಭಾರತದ ಅಗ್ರ ಡಬಲ್ಸ್ ತಾರೆಯರಾದ ಸಾತ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ ಜೋಡಿ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ ಜೋಡಿ ಮಲೇಷ್ಯಾ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ೈನಲ್‌ಗೇರಿದೆ. ಸಿಂಗಲ್ಸ್‌ನಲ್ಲಿ ಏಕೈಕ ಭರವಸೆ ಎನಿಸಿದ್ದ ಕಿಡಂಬಿ ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ನಿರಾಸೆ ಕಂಡರು.

    ಗುರುವಾರ ನಡೆದ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ವಿಶ್ವ ನಂ. 2 ಸಾತ್ವಿಕ್-ಚಿರಾಗ್ ಜೋಡಿ 21-11, 21-18 ನೇರ ಗೇಮ್‌ಗಳಿಂದ ್ರಾನ್ಸ್‌ನ ಲೂಕಾಸ್ ಕ್ರೊವಿ- ರೋನನ್ ಲಬರ್ ವಿರುದ್ಧ 39 ನಿಮಿಷಗಳಲ್ಲಿ ಗೆಲುವು ದಾಖಲಿಸಿತು. ಇದರೊಂದಿಗೆ ವರ್ಷದ ಮೊದಲ ಸವಾಲಿನಲ್ಲಿ ಕಳೆದ ವರ್ಷದ ಾರ್ಮ್ ಮುಂದುವರಿಸಿದೆ. ಚಿರಾಗ್-ಸಾತ್ವಿಕ್ ಜೋಡಿ ಈ ಟೂರ್ನಿಯಲ್ಲಿ ಆಡುವ ಸಲುವಾಗಿ ರಾಷ್ಟ್ರಪತಿಯಿಂದ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು.

    ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ ಜೋಡಿ ಜಪಾನ್‌ನ ಮಾಜಿ ವಿಶ್ವ ನಂ.1 ಜೋಡಿ ವಕನಾ ನಗಹರ -ಮಟ್ಸುಮೊಟೊ ಮಯುಗೆ ಶಾಕ್ ನೀಡಿತು. ವಿಶ್ವ ನಂ.24 ಭಾರತೀಯ ಜೋಡಿ 21-19, 13-21, 21-15ರಿಂದ ಗೆಲುವು ದಾಖಲಿಸಿತು. ಶ್ರೀಕಾಂತ್ ಹಾಂಕಾಂಗ್‌ನ ಎನ್‌ಗ್ ಕಾ ಲಾಂಗ್ ಆಂಗುಸ್ ವಿರುದ್ಧ 13-21, 17-21ರಿಂದ ಪರಾಭವಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts