More

    ಚೀನಾದಿಂದ ಭಾರತಕ್ಕೆ ಬರಲು ನೀಡಿದ್ದ ಇ-ವೀಸಾಗಳು ರದ್ದು: ಕೊರೊನಾ ವೈರಸ್​ ಎಫೆಕ್ಟ್​

    ಬೀಜಿಂಗ್​: ಚೀನಾದಿಂದ ಭಾರತಕ್ಕೆ ಬರುವವರಿಗೆ ನೀಡುವ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಚೀನಾದ ಭಾರತ ರಾಯಭಾರಿ ಕಚೇರಿ ತಿಳಿಸಿದೆ. ಈ ಮೊದಲೇ ನೀಡಿರುವ ವೀಸಾಗಳ ಮಾನ್ಯತೆಯನ್ನು ಹಿಂಪಡೆದಿರುವುದಾಗಿ ತಿಳಿಸಲಾಗಿದೆ.

    ಚೀನಾದಲ್ಲಿ ಕೊರೊನಾ ವೈರಸ್​ ದಾಳಿಯ ಪ್ರಮಾಣ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ಈ ಸಮಯದಲ್ಲಿ ಚೀನಾದ ಮೂಲದವರಿಗೆ ಮತ್ತು ಚೀನಾದಲ್ಲಿ ಪ್ರಸ್ತುತ ವಾಸವಿರುವವರಿಗೆ ಭಾರತಕ್ಕೆ ಬರಲು ಇ-ವೀಸಾಗಳನ್ನು ನೀಡಲಾಗುವುದಿಲ್ಲ ಎಂದು ಚೀನಾದ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಈ ಮೊದಲೇ ಹಲವರಿಗೆ ಇ-ವೀಸಾ ವಿತರಣೆಯಾಗಿದ್ದು ಅವುಗಳ ಮಾನ್ಯತೆಯನ್ನು ತಾವು ಹಿಂಪಡೆದಿರುವುದಾಗಿ ಕಚೇರಿ ತಿಳಿಸಿದೆ. ಒಂದು ವೇಳೆ ಭಾರತಕ್ಕೆ ತೆರಳಲು ಬಲವಾದ ಕಾರಣಗಳೇನಾದರೂ ಇದ್ದರೆ, ಅಂತವರು ಬೀಜಿಂಗ್​ನಲ್ಲಿರುವ ರಾಯಭಾರಿ ಕಚೇರಿ ಅಥವಾ ಶಾಂಘೈ ಹಾಗೂ ಗುವಾಂಗ್​ನಲ್ಲಿರುವ ಭಾರತೀಯ ದೂತವಾಸಗಳನ್ನು ಅಥವಾ ಅಲ್ಲಿನ ವೀಸಾ ಅರ್ಜಿ ಕೇಂದ್ರಗಳನ್ನು ಸಂಪಕಿರ್ಸಬೇಕು ಎಂದು ತಿಳಿಸಲಾಗಿದೆ.

    ಚೀನಾದಲ್ಲಿ ಕೊರೊನಾ ವೈರಸ್​ಗೆ ಈಗಾಗಲೇ 304 ಜನರು ಮೃತರಾಗಿದ್ದು, 14,562ಕ್ಕೂ ಹೆಚ್ಚು ಜನರಲ್ಲಿ ವೈರಸ್​ ಇರುವುದಾಗಿ ತಿಳಿಸಲಾಗಿದೆ. ಭಾರತ, ಅಮೆರಿಕ ಸೇರಿದಂತೆ ಒಟ್ಟು 25 ದೇಶಗಳಲ್ಲಿ ಕೊರೊನ ವೈರಸ್​ ಇರುವುದು ಪತ್ತೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts