More

    ಚಾಲನಾ ಸಿಬ್ಬಂದಿ ವಿಶ್ರಾಂತಿ ಕಟ್ಟಡ ಉದ್ಘಾಟನೆ

    ಹುಬ್ಬಳ್ಳಿ: ಇಲ್ಲಿಯ ರೈಲ್ವೆ ನಿಲ್ದಾಣದ ಬಳಿ 3.9 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಚಾಲನಾ ಸಿಬ್ಬಂದಿ ಹಾಗೂ ಕಾವಲುಗಾರರಿಗಾಗಿ (ಗಾರ್ಡ್ಸ್) ನಿರ್ವಿುಸಿದ ವಿಶ್ರಾಂತಿ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಯಿತು.

    ಮುಖ್ಯವಾಗಿ ಸರಕು ಸಾಗಣೆ ರೈಲ್ವೆಯ ಲೋಕೊ ಪೈಲಟ್ ಹಾಗೂ ಗಾರ್ಡ್ಸ್​ಗಳು ಕೆಲಸಕ್ಕೆ ಹಾಜರಾಗಲು ನಿರ್ದಿಷ್ಟ ಸಮಯ ಇರುವುದಿಲ್ಲ. ಕರ್ತವ್ಯದ ಕರೆಯ ಮೇರೆಗೆ ತಕ್ಷಣ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ದೀರ್ಘ ಅವಧಿಯವರೆಗೆ ಕೆಲಸ ನಿರ್ವಹಿಸುವ ಚಾಲನಾ ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ಸಿಗಲೆಂದು ಈ ಕಟ್ಟಡ ನಿರ್ವಿುಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

    ಒಟ್ಟಾರೆ 3375 ಚದರ ಮೀಟರ್ ವಿಸ್ತೀರ್ಣದ ಎರಡು ಅಂತಸ್ತಿನ ಈ ಕಟ್ಟಡ 36 ಕೊಠಡಿಗಳನ್ನು ಹೊಂದಿದ್ದು, ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ಇಬ್ಬರು ವಾಸ್ತವ್ಯ ಮಾಡಲು ಅನುಕೂಲವಾಗುವಂತೆ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹವಾ ನಿಯಂತ್ರಿತ (ಎಸಿ) ಕೊಠಡಿಯು ಅಟ್ಯಾಚ್ಡ್ ಸ್ನಾನ ಮತ್ತು ಶೌಚ ಗೃಹ, ವಾಶ್​ರೂಮ್ ಸೌಲಭ್ಯ ಹೊಂದಿದೆ. ಗ್ರಂಥಾಲಯ, ಬಿಡುವಿನ ವೇಳೆಯಲ್ಲಿ ಕೇರಂ ಹಾಗೂ ಚೆಸ್ ಆಡಲು ಪ್ರತ್ಯೇಕ ಮನರಂಜನಾ ಕೊಠಡಿ ಇದೆ. ಅಡುಗೆ ಕೊಠಡಿ, ಡೈನಿಂಗ್ ಹಾಲ್, ಉಗ್ರಾಣ, ಕಚೇರಿ ಹೊಂದಿದೆ. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ ಸಿಂಗ್ ಅವರು ಸೇವಾ ನಿವೃತ್ತಿಯ ದಿನ ಈ ಕಟ್ಟಡವನ್ನು ಉದ್ಘಾಟಿಸಿದರು. ಪ್ರಧಾನ ಮುಖ್ಯ ಇಂಜಿನಿಯರ್ ವಿಪುಲಕುಮಾರ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡ, ಹಿರಿಯ ಅಧಿಕಾರಿಗಳಾದ ಹರಿಶಂಕರ ವರ್ವ, ಅನಿಲ ಪವಿತ್ರನ್, ಪಿ.ವಿ. ರಾಜಶೇಖರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts