More

    ಗಿಣಿಮರಿಯ ಆದರ್ಶ

    | ಎನ್​.ಜಯಭೀಮ್​ ಜೋಯ್ಸ್​, ಶಿವಮೊಗ್ಗ
    ಗಿರಿವನ ಎಂಬುದೊಂದು ದಟ್ಟವಾದ ಅರಣ್ಯ. ಅಲ್ಲಿ ಶ್ರೀಗಂಧದ ಮರಗಳಿದ್ದವು. ಒಂದು ಬಲಿತ ಗಂಧದ ಮರದ ಮೇಲೆ ಒಂದು ಸುಂದರವಾದ ಗಿಣಿಯ ಸಂಸಾರವಿತ್ತು. ಒಂದು ದಿನ ಸುಡು ಬಿಸಿಲಿನ ಸಮಯ. ಬಿಸಿಲ ಶಾಖದಿಂದ ಗಾಳಿ ಬೀಸುತ್ತಿದ್ದುದರಿಂದ ಮರಗಳು ಒಂದಕ್ಕೊಂದು ಉಜ್ಜಿ ಬೆಂಕಿ ಹೊತ್ತಿಕೊಂಡು ನಿಧಾನವಾಗಿ ಹುಲ್ಲಿನ ಪ್ರದೇಶ ಸುಡುತ್ತಾ ಶ್ರೀಗಂಧದ ಮರದ ಕಡೆಗೆ ಬೆಂಕಿ ಬರತೊಡಗಿತು. ನಿತ್ಯದ ಆಹಾರ ಸಂಗ್ರಹಣೆಗಾಗಿ ದೊಡ್ಡ ಗಿಣಿಗಳು ದೂರ ಹಾರಿ ಹೋಗಿದ್ದವು. ಒಂದು ಮರಿ ಮಾತ್ರ ಗಂಧದ ಮರದ ಮೇಲೆ ಉಳಿದುಕೊಂಡಿತ್ತು. ಗಂಧದ ಮರವು ತನ್ನಲ್ಲಿದ್ದ ಗಿಣಿಮರಿಗೆ “ಪುಟ್ಟಾ ಬೆಂಕಿ ಕೆನ್ನಾಲಿಗೆಯನ್ನು ಚಾಚಿ ನನ್ನ ಹತ್ತಿರವೇ ಬರುತ್ತಿದೆ. ನಾನಾದರೋ ಬಿದ್ದು ಹೋಗುವ ಹಳೆಯ ಮರ. ಬೆಂಕಿ ಒಂದೊಂದೇ ರೆಂಬೆಗಳನ್ನು ಸುಡುತ್ತಾಬರುತ್ತಿದೆ. ನನ್ನ ಕಾಂಡವನ್ನೂ ಸುಡಲು ಬಹಳ ಸಮಯವಿಲ್ಲ. ನಾನು ಹಳೆಯವನಾಗಿರುವುದರಿಂದ ಬೆಂಕಿ ನನ್ನನ್ನು ಸುಟ್ಟರೆ ಹೆಚ್ಚಿನ ದು@ಖವೇನಿಲ್ಲ. ಆದರೆ ನೀನಾದರೋ ಇನ್ನೂ ಚಿಕ್ಕವಯಸ್ಸಿನಲ್ಲಿದ್ದೀಯ. ಬಾಳಿ ಬದುಕ ಬೇಕಾಗಿರುವ ವಯಸ್ಸು. ಆದ್ದರಿಂದ ನೀನು ನನ್ನ ಆಶ್ರಯದಿಂದ ದೂರ ಹಾರಿಹೋಗು’ ಎಂದು ಬುದ್ಧಿಮಾತು ಹೇಳಿತು. ಗಿಣಿಮರಿಗೆ ಅಪಾಯದ ಅರಿವಾಯಿತು.

    ಅದು ವಯಸ್ಸಿನಲ್ಲಿ ಸಣ್ಣದಾದರೂ, ತನಗೆ ಆಶ್ರಯಕೊಟ್ಟ ಗಂಧದ ಮರ ಸುಟ್ಟು ಹೋಗುವುದನ್ನು ನೆನೆದು ಮನದಲ್ಲಿ ದು@ಖಪಡುತ್ತದೆ. ಇಂಥ ಮರವನ್ನು ಬಿಟ್ಟು ಹೋಗುವುದು ಹೇಗೆ ಎಂದು ಯೋಚಿಸಿ ಅಲ್ಲಿಯೇ ಹತ್ತಿರದಲ್ಲಿದ್ದ ನೀರಿನ ಕೊಳದತ್ತ ಹಾರಿತು. ಕೊಳದಲ್ಲಿ ಮುಳುಗಿ ಎದ್ದು, ರೆಕ್ಕೆಯಲ್ಲಿ ಹಿಡಿದುಕೊಂಡ ನೀರನ್ನು ತಂದು ಉರಿವ ಬೆಂಕಿಗೆ ಸುರಿಯಿತು. ಬೆಂಕಿಯನ್ನು ನಂದಿಸುವೆ ಎಂಬ ದೃಢ ವಿಶ್ವಾಸ ಆ ಗಿಣಿಮರಿಯದು. ಮತ್ತೆ ಮತ್ತೆ ಅದೇ ಕೆಲಸ. ಸ್ವಲ್ಪ ಹೊತ್ತಿನಲ್ಲಿ ಗಿಣಿಮರಿಗೆ ಸುಸ್ತಾಯಿತು. ಬೆಂಕಿಯ ಝಳ ರೆಕ್ಕೆಗೆ ತಾಕಿ ಕೆಂಪಗೆ ಗಾಯವಾದಂತಾಯ್ತು. ಇದಾವುದನ್ನೂ ಲೆಕ್ಕಿಸದೆ ಬೆಂಕಿಯನ್ನು ಆರಿಸುವ ಪ್ರಯತ್ನದಲ್ಲೆ ಇತ್ತು. ಈ ದೃಶ್ಯವನ್ನು ಸ್ವರ್ಗಲೋಕದಿಂದ ನೋಡಿದ ದೇವೇಂದ್ರನು ಗಿಣಿಮರಿಯ ಸಾಹಸವನ್ನು ಮೆಚ್ಚಿ, ಭೂಲೋಕದಲ್ಲಿ ನಡೆಯುತ್ತಿರುವ ಈ ಸಣ್ಣ ಪಯ ಪ್ರಯತ್ನಕ್ಕೆ ಲಸಿಕೆ ಸಿಗುವಂತಾಗಲು ತಣವೇ ಮಳೆ ಸುರಿಸುವಂತೆ ವರುಣದೇವನಿಗೆ ಹೇಳುತ್ತಾನೆ. ಸಣ್ಣಪ ತನಗೆ ಆಶ್ರಯಕೊಟ್ಟ ಗಂಧದ ಮರವನ್ನು ಬೆಂಕಿಯಿಂದ ಉಳಿಸುವ ಪ್ರಯತ್ನ ನೋಡಿ ವರುಣದೇವನೂ ಕನಿಕರಗೊಂಡು ಆಕಾಶದಲ್ಲಿ ಮೋಡಗಳನ್ನು ಸೇರಿಸಿ ಧಾರಾಕಾರ ಮಳೆ ಸುರಿಯುವಂತೆ ಮಾಡಿದ. ಣಾರ್ಧದಲ್ಲಿ ಬೆಂಕಿ ನಂದಿತು. ಗಿಣಿ ಮರಿಯ ಸಾಹಸ ಮತ್ತು ಪ್ರಯತ್ನದಿಂದ ಗಂಧದ ಮರ ಬೆಂಕಿಯಿಂದ ನಾಶವಾಗುವುದು ತಪ್ಪಿತು. ನಮಗೆ ನೆರವಾದವರಿಗೆ, ಆಶ್ರಯ ಕೊಟ್ಟವರಿಗೆ ತಮ್ಮಿಂದಾದ ಸಹಾಯಪೂರ್ವಕ ಕೃತತೆಗಳನ್ನು ಸಲ್ಲಿಸಬೇಕೆಂಬ ಸಂದೇಶವನ್ನು ಗಿಣಿಮರಿ ತಿಳಿಸಿದ ಬಗೆ ಅನನ್ಯ.

    (ಲೇಖಕರು ಹವ್ಯಾಸಿ ಬರಹಗಾರರು)
    [email protected])

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts