More

    ವಿಶ್ವಕಪ್ ಫೈನಲ್ ದಾಖಲೆ ನಿಮಿಷ ವೀಕ್ಷಣೆ: 2011ರ ಆವೃತ್ತಿಗೆ ಹೋಲಿಸಿದರೆ 38 ಪ್ರತಿಶತ ಹೆಚ್ಚು

    ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ವಿಶ್ವಕಪ್ ಎಂಬ ದಾಖಲೆ ಬರೆದಿದೆ. ಜತೆಗೆ ಭಾರತ ಹಾಗೂ ಆಸೀಸ್ ನಡುವಿನ ೈನಲ್ ಪಂದ್ಯ ನೇರಪ್ರಸಾರದಲ್ಲಿ ಅತಿಹೆಚ್ಚು ವೀಕ್ಷಣೆಗೆ ಒಳಪಟ್ಟ ಐಸಿಸಿ ಆಯೋಜಿತ ಪಂದ್ಯ ಎನಿಸಿದೆ. ಟೂರ್ನಿಯ ನೇರಪ್ರಸಾರ ಹಾಗೂ ಡಿಜಿಟಲ್ ವೀಕ್ಷಣೆಯ ಅಂಕಿ-ಅಂಶಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗುರುವಾರ ಬಹಿರಂಗಪಡಿಸಿದೆ.

    ಟೂರ್ನಿಯು ಒಂದು ಲಕ್ಷ ಕೋಟಿ (ಒಂದು ಟ್ರಿಲಿಯನ್) ನಿಮಿಷಕ್ಕೂ ಹೆಚ್ಚು ವೀಕ್ಷಿಸಲಾಗಿದೆ. ಇದು 2011ರ ಆವೃತ್ತಿಗೆ ಹೋಲಿಸಿದರೆ 38 ಪ್ರತಿಶತ ಹೆಚ್ಚು ಎನ್ನಲಾಗಿದೆ. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ಗಿಂತ ಈ ಬಾರಿ ಶೇ.17ರಷ್ಟು ಏರಿಕೆ ಕಂಡು ಬಂದಿದೆ. ಭಾರತ ಹಾಗೂ ಆಸೀಸ್ ನಡುವಿನ ೈನಲ್ ಪಂದ್ಯ ನೇರಪ್ರಸಾರದಲ್ಲಿ ಅತಿಹೆಚ್ಚು ವೀಕ್ಷಣೆಗೆ ಒಳಪಟ್ಟ ಐಸಿಸಿ ಆಯೋಜನೆ ಪಂದ್ಯವಾಗಿದ್ದು, ವಿಶ್ವದಾದ್ಯಂತ 87.6 ಶತಕೋಟಿ (87.6 ಬಿಲಿಯನ್) ನಿಮಿಷ ವೀಕ್ಷಿಸಲಾಗಿದೆ. ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆದ 2011ರ ೈನಲ್ ಪಂದ್ಯಕ್ಕೆ ಹೋಲಿಕೆ ಮಾಡಿದರೆ ಶೇ.46ರಷ್ಟು ಅಧಿಕ ಎನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts