More

    ಕಿರಿಯರ ವಿಶ್ವಕಪ್ ಆಫ್ರಿಕಾಕ್ಕೆ ಸ್ಥಳಾಂತರ : ಅಮಾನತಿನ ಬಳಿಕ ಶ್ರೀಲಂಕಾ ಕೈತಪ್ಪಿದ ಆತಿಥ್ಯ

    ಅಹಮದಾಬಾದ್: ಮುಂದಿನ ವರ್ಷ ಜನವರಿಯಲ್ಲಿ ಶ್ರೀಲಂಕಾದಲ್ಲಿ ನಿಗದಿಯಾಗಿದ್ದ 19 ವಯೋಮಿತಿಯ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ಇದಕ್ಕೆ ಅನುಮೋದನೆ ಪಡೆಯಲಾಗಿದೆ.
    ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ (ಎಸ್‌ಎಲ್‌ಸಿ) ಸರ್ಕಾರದ ಹಸ್ಪಕ್ಷೇಪ ಹಿನ್ನೆಲೆ 12 ದಿನಗಳ ಹಿಂದಷ್ಟೇ ಐಸಿಸಿ, ಲಂಕಾ ಮಂಡಳಿಯನ್ನು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

    ಎಸ್‌ಎಲ್‌ಸಿಯನ್ನು ಅಮಾನತುಗೊಳಿಸಿದ ಕೆಲ ದಿನಗಳಲ್ಲಿ 15ನೇ ಆವೃತ್ತಿಯ ಟೂರ್ನಿಯ ಸ್ಥಳಾಂತರದ ಬಗ್ಗೆ ಇತರ ರಾಷ್ಟ್ರಗಳಿಗೆ ಐಸಿಸಿ ಮಾಹಿತಿ ನೀಡಿತ್ತು ಎನ್ನಲಾಗಿದೆ. 2024ರ ಜನವರಿ 13ರಿಂದ ೆಬ್ರವರಿ 3ರವರೆಗೆ ಟೂರ್ನಿ ಆಯೋಜಿಸಲಾಗಿದೆ. 2020ರಲ್ಲಿ ಟೂರ್ನಿಗೆ ಆತಿಥ್ಯ ವಹಿಸಿದ್ದ ದಕ್ಷಿಣ ಆಫ್ರಿಕಾಗೆ ಮತ್ತೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಒಲಿದಿದೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ 2022ರ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು.

    ಲಂಕಾ ದ್ವಿಪಕ್ಷೀಯ ಸರಣಿಗಿಲ್ಲ ತೊಂದರೆ: ಎಸ್‌ಎಲ್‌ಸಿ ಅಮಾನತುಗೊಂಡಿದ್ದರೂ, ಶ್ರೀಲಂಕಾ ಕ್ರಿಕೆಟ್ ತಂಡ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಐಸಿಸಿ ಸ್ಪಷ್ಟನೆ ನೀಡಿದೆ. ಐಸಿಸಿ ಟೂರ್ನಿ ಸೇರಿ ಎಲ್ಲ ದ್ವಿಪಕ್ಷೀಯ ಸರಣಿಗಳಲ್ಲಿ ಶ್ರೀಲಂಕಾ ತಂಡ ಭಾಗವಹಿಸಲು ಅರ್ಹವಾಗಿದೆ. ಆದರೆ ದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನೀಡಲಾಗುವ ಅನುದಾನವನ್ನು ಐಸಿಸಿ ನಿರ್ವಹಿಸಲಿದೆ ಎನ್ನಲಾಗಿದೆ. ಐಸಿಸಿ ಏಕದಿನ ವಿಶ್ವಕಪ್ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದ ಶ್ರೀಲಂಕಾ 2025ರ ಚಾಂಪಿಯನ್ಸ್ ಟ್ರೋಫಿ ಅರ್ಹತೆಯನ್ನು ಕಳೆದುಕೊಂಡಿದೆ. ಆದರೆ 2024ರ ಟಿ20 ವಿಶ್ವಕಪ್‌ನಲ್ಲಿ ಆಡಲು ಅವಕಾಶ ಪಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts