More

    ಪ್ರೇಮಿಗಳ ದಿನಾಚರಣೆಗೆ ಹಿಂದೂ ಜನಜಾಗೃತಿ ಸಮಿತಿ ವಿರೋಧ

    ಬೆಂಗಳೂರು : ಫೆ.14 ರಂದು ಪ್ರೇಮಿಗಳ ದಿನಾಚರಣೆಗೆ ಹಿಂದೂ ಜನಜಾಗೃತಿ ಸಮಿತಿ (ಹಿಂಜಸ)ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಿಜವಾದ ಪ್ರೇಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ. ಪಾಶ್ಚಾತ್ಯರ ಅನೈತಿಕತೆಯ ಆಚರಣೆಯನ್ನು ಅನುಸರಿಸುವುದು ಭಾರತಿಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಯುವ ಸಮುದಾಯ ಈ ಆಚರಣೆಯಿಂದ ದೂರ ಇರಬೇಕು ಎಂದು ಸಮಿತಿ ವಕ್ತಾರ ಮೋಹನ್ ಗೌಡ ಆಗ್ರಹಿಸಿದ್ದಾರೆ.

    ಸನಾತನ ಧರ್ಮದ ಪ್ರತಿಯೊಂದು ಆಚರಣೆಗೂ ಒಂದು ಅರ್ಥವಿದ್ದು, ಪಾಶ್ಚಾತ್ಯರ ಅರ್ಥಹೀನ ಆಚರಣೆಗೆ ಭಾರತೀಯರು ಪ್ರಭಾವಿತರಾಗಬಾರದು. ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಯುವಕರು ಮದ್ಯಪಾನ ಮಾಡುವುದು, ಮಾದಕದ್ರವ್ಯದ ಸೇವನೆ ಮಾಡುವುದು, ಪಬ್‌ಗೆ ಹೋಗಿ ಲಿಂಗ ಭೇದವಿಲ್ಲದೇ ಕುಣಿಯುವುದು, ಯುವತಿಯರನ್ನು ಪೀಡಿಸುವುದು, ಅತ್ಯಾಚಾರ, ಬಲಾತ್ಕಾರಗಳಂತಹ ಘಟನೆಗಳಾಗುತ್ತಿವೆ. ಯುವಕರನ್ನು ದಾರಿ ತಪ್ಪಿಸಲು ಡ್ರಗ್ಸ್ ಮಾಫಿಯಾ ಇಂತಹ ಆಚರಣೆಗೆ ಕುಮ್ಮಕ್ಕು ನೀಡುತ್ತಿದೆ. ಈ ಬಗ್ಗೆ ಯುವ ಜನಾಂಗ ಅರ್ಥ ಮಾಡಿಕೊಂಡು ಪವಿತ್ರವಾದ ಪ್ರೀತಿಯ ಹೆಸರಿನಲ್ಲಿ ಆಗುತ್ತಿರು ಅನಾಚಾರಗಳಿಂದ ದೂರ ಇರಬೇಕು ಎಂದು ಹಿಂಜಸ ಮನವಿ ಮಾಡಿದೆ.

    2019 ಫೆ.14 ರಂದು ಪಾಕ್ ಪ್ರಚೋದಿತ ಭಯೋತ್ಪಾಧಕರು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ಆಕ್ರಮಣ ಮಾಡಿ 40 ಯೋಧರು ಹುತಾತ್ಮರಾಗಿದ್ದು, ಅಂದು ಮಾಡುವ ವ್ಯಾಲೆಂಟೈನ್ಸ್ ಡೇ ವೀರ ಯೋಧರಿಗೆ ಮಾಡುವ ಅಪಮಾನವಾಗುತ್ತದೆ. ಈ ದಿನವನ್ನು ಪ್ರೇಮಿಗಳ ದಿನದ ಬದಲು ಭಯೋತ್ಪಾದನಾ ವಿರೋಧಿ ದಿನ ಹಾಗೂ ವೀರಯೋಧ ರಾಷ್ಟ್ರಪುರುಷರ ದಿನವನ್ನಾಗಿ ಆಚರಿಸುವಂತೆ ಹಿಂಜಸ ಕರೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts