

ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸತತ ಪ್ಯಾನ್ ಇಂಡಿಯಾ ಸೂಪರ್ ಹಿಟ್ ಸಿನಿಮಾಗಳೊಂದಿಗೆ ಫುಲ್ ಫಾರ್ಮ್‌ನಲ್ಲಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ಇನ್ನೂ ಎರಡು ಪ್ಯಾನ್ ಇಂಡಿಯಾ ಚಿತ್ರಗಳಿವೆ. ಇದರೊಂದಿಗೆ ಮೂರು ಪ್ರಾದೇಶಿಕ ಚಿತ್ರಗಳನ್ನೂ ಮಾಡುತ್ತಿದ್ದಾರೆ. ಬಿಡುವಿಲ್ಲದೆ, ಶೂಟಿಂಗ್ ಮಾಡುತ್ತಿರುವ ಪರಿಣಾಮ ರಶ್ಮಿಕಾ ಕೊಂಚ ಬಳಲಿದ್ದಾರೆ. ಆದ್ದರಿಂದ ರಶ್ಮಿಕಾ ಈಗ ರೆಸ್ಟ್ ಮೂಡ್ನಲ್ಲಿದ್ದಾರೆ.
ಸಾಮಾನ್ಯವಾಗಿ ಬಿಡುವಿನ ಸಂದರ್ಭದಲ್ಲಿ ರಶ್ಮಿಕಾ, ಸಾಮಾಜಿಕ ಜಾಲತಾಣ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಾರೆ. ಆದರೆ, ಈ ಬಾರಿ ನಿರಂತರ ಶೂಟಿಂಗ್ ಇದ್ದ ಕಾರಣ ಬಿಡುವ ಸಿಕ್ಕಿರಲಿಲ್ಲ. ಆದರೆ, ಇದೀಗ ತುಂಬಾ ದಣಿದಿರುವುದರಿಂದ ಕೊಂಚ ಬಿಡುವು ಮಾಡಿಕೊಂಡಿದ್ದು, ಇದರ ನಡುವೆ ಅಭಿಮಾನಿಗಳ ಯೋಗಕ್ಷೇಮವನ್ನು ರಶ್ಮಿಕಾ ವಿಚಾರಿಸಿದ್ದಾರೆ.
ನಾನು ನಿಮ್ಮೊಂದಿಗೆ ಮಾತನಾಡಿ ಬಹಳ ದಿನಗಳಾಗಿವೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವಿಂದು ಮಾತಾಡೋಣ. ಇಲ್ಲಿಯವರೆಗೆ ನಡೆದಿರುವ ಎಲ್ಲವನ್ನೂ ತಿಳಿದುಕೊಳ್ಳಲು ನಾನು ಬಯಸುತ್ತೇನೆ. ನಿಮ್ಮ ವ್ಯಾಲೆಂಟೈನ್ಸ್ ಡೇ ಪ್ಲಾನ್‌ಗಳನ್ನು ಕೂಡ ತಿಳಿದುಕೊಳ್ಳಲು ಇಚ್ಛಿಸುತ್ತೇನೆ. ಹೀಗಾಗಿ ನಿಮ್ಮ ಪ್ರೇಮಿಗಳ ದಿನದ ಪ್ಲಾನ್ ಏನು ತಿಳಿಸಿ ಎಂದಿರುವ ರಶ್ಮಿಕಾ, ನಾನು ಎಲ್ಲ ಕಾಮೆಂಟ್ಗಳನ್ನು ಓದುತ್ತೇನೆ. ಕೆಟ್ಟವರೆಲ್ಲ ದಯವಿಟ್ಟು ದೂರವಿರಿ, ಇದು ನನ್ನ ಪ್ರೀತಿಪಾತ್ರರಿಗೆ ಮಾತ್ರ ಎಂದು ರಶ್ಮಿಕಾ ಹೇಳಿದ್ದಾರೆ.
ಅಂದಹಾಗೆ ರಶ್ಮಿಕಾ, ಈ ಟ್ವೀಟ್ ಜೊತೆಗೆ ಎರಡು ಮುದ್ದಾದ ಸೆಲ್ಫಿಗಳನ್ನು ಸಹ ಹಂಚಿಕೊಂಡಿದ್ದಾರೆ. ರಶ್ಮಿಕಾ ಅವರ ಟ್ವೀಟ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಂತೆ, ಈ ಪೋಸ್ಟ್ ಇದೀಗ ವೈರಲ್ ಆಗಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಟಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಪುಷ್ಪ-2 ರಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಹಾಗೆಯೇ ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ 'ಚವಾ' ಚಿತ್ರದಲ್ಲೂ ವಿಕ್ಕಿ ಕೌಶಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೇಖರ್ ಕಮುಲ ನಿರ್ದೇಶನದಲ್ಲಿ ತಮಿಳಿನಲ್ಲಿ ಧನುಷ್ ಚಿತ್ರವೊಂದು ತಯಾರಾಗುತ್ತಿದ್ದು, ಇದಕ್ಕೂ ರಶ್ಮಿಕಾರೇ ನಾಯಕಿ. ಇದಿಷ್ಟೇ ಅಲ್ಲದೆ, ರೇನ್‌ಬೋ ಮತ್ತು ದಿ ಗರ್ಲ್‌ಫ್ರೆಂಡ್ ಎಂಬ ಎರಡು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನೂ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಅನಿಮಲ್ 2 ಮತ್ತು ಸ್ಪಿರಿಟ್ ಕೂಡ ಸಾಲಿನಲ್ಲಿವೆ. (ಏಜೆನ್ಸೀಸ್)