More

    ಜಮ್ಮುಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ಮುಂದಿನ ನಡೆ ಏನು ಗೊತ್ತಾ? ಶುರುವಾಗಲಿದೆಯಾ ರೊಹಿಂಗ್ಯಾಗಳಿಗೆ ಆತಂಕ…!

    ಜಮ್ಮು: ಪೌರತ್ವ ತಿದ್ದುಪಡಿ ಕಾಯ್ದೆ ಎಲ್ಲ ರಾಜ್ಯಗಳಲ್ಲೂ ಅನುಷ್ಠಾನವಾದ ಬಳಿಕ ಕೇಂದ್ರದ ಮುಂದಿನ ನಡೆ ಯಾವುದು ಎಂಬುದರ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಹೇಳಿದ್ದಾರೆ.

    ಸಿಎಎ ಕಾಯ್ದೆಯಾಗಿ ಇಷ್ಟುದಿನವಾದರೂ ಎಲ್ಲ ರಾಜ್ಯಗಳಲ್ಲಿ ಇನ್ನೂ ಅಧಿಕೃತವಾಗಿ ಅನುಷ್ಠಾನವಾಗಲಿಲ್ಲ. ಹಲವು ಕಡೆಗಳಲ್ಲಿ ಪ್ರತಿಭಟನೆಗಳೇ ಮುಗಿದಿಲ್ಲ. ಆದರೆ ಯಾವ ರಾಜ್ಯಸರ್ಕಾರಗಳೂ ಸಿಎಎ ಅನುಷ್ಠಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಈಗಾಗಲೇ ಕೇಂದ್ರ ಕಾನೂನು ಸಚಿವರು ಖಡಕ್ ಆಗಿ ಸೂಚನೆ ನೀಡಿದ್ದಾರೆ.

    ಹೀಗಿರುವಾಗ ಸಿಎಎ ಸಂಪೂರ್ಣ ಅನುಷ್ಠಾನದ ಬಳಿಕ ಕೇಂದ್ರ ಸರ್ಕಾರದ ಮುಂದಿನ ನಡೆ ರೊಹಿಂಗ್ಯಾ ಅಕ್ರಮ ವಲಸಿಗರ ಗಡೀಪಾರು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ತಿಳಿಸಿದ್ದಾರೆ.
    ರೊಹಿಂಗ್ಯಾಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯ ಆಗುವುದಿಲ್ಲ. ಅವರಿಗೆ ಭಾರತದ ಪೌರತ್ವ ನೀಡಲು ಸಾಧ್ಯವಿಲ್ಲದ ಕಾರಣ ಇನ್ನು ಅವರನ್ನು ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಪಾಸ್​ ಆದ ದಿನವೇ ಜಮ್ಮುಮತ್ತು ಕಾಶ್ಮೀರದಲ್ಲಿ ಅನುಷ್ಠಾನ ಮಾಡಲಾಗಿದೆ. ಅಲ್ಲಿ ಆದರೆ, ಹೋದರೆ ಎಂದು ಯಾರೂ ಕತೆ ಹೇಳಲಿಲ್ಲ. ಈಗ ಮುಂದಿನ ನಡೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ರೊಹಿಂಗ್ಯಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದು ಎಂದಿದ್ದಾರೆ.

    ಜಮ್ಮುಕಾಶ್ಮೀರದಲ್ಲಿ ಗಣನೀಯ ಪ್ರಮಾಣದಲ್ಲಿ ರೊಹಿಂಗ್ಯಾ ಅಕ್ರಮ ವಲಸಿಗರು ಇದ್ದಾರೆ ಎಂದು ಅಂಕಿಅಂಶಗಳಿಂದ ಗೊತ್ತಾಗಿದೆ. ಕೇಂದ್ರ ಸರ್ಕಾರ ಅವರ ಪಟ್ಟಿಯನ್ನು ಸಿದ್ಧಪಡಿಸಲಿದೆ. ಬಳಿಕ ಗಡೀಪಾರಿಗೆ ಸಂಬಂಧಪಟ್ಟ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆಯಡಿ ಬರುವ ಆರು ಅಲ್ಪಸಂಖ್ಯಾತರ ಪಟ್ಟಿಗೆ ರೊಹಿಂಗ್ಯಾ ಅಕ್ರಮ ವಲಸಿಗರು ಸೇರ್ಪಡೆ ಆಗುವುದಿಲ್ಲ. ಅಲ್ಲದೆ, ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಿಂದಲೂ ಬಂದವರಲ್ಲ. ಮ್ಯಾನ್ಮಾರ್​ದಿಂದ ಬಂದು ಸೇರಿಕೊಂಡ ಅವರೆಲ್ಲ ಮತ್ತೆ ಅದೇ ದೇಶಕ್ಕೆ ಹೋಗಿ ಸೇರಿಕೊಳ್ಳಬೇಕು ಎಂದಿದ್ದಾರೆ.
    ಜಮ್ಮು ಮತ್ತು ಸಾಂಬ್ಲಾ ಜಿಲ್ಲೆಗಳಲ್ಲಿ ರೊಹಿಂಗ್ಯಾ ಮುಸ್ಲಿಮರು, ಬಾಂಗ್ಲಾದೇಶಿಯರು ಸೇರಿ 13, 700 ವಿದೇಶಿಯರು ನೆಲೆನಿಂತಿದ್ದಾರೆ ಎಂದು ಸರ್ಕಾರದ ವರದಿ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts