More

    ಏಡ್ಸ್ ಕಾಯಿಲೆ ಶೂನ್ಯಕ್ಕೆ ತರುವ ಉದ್ದೇಶ

    ಯಳಂದೂರು: ದೇಶದಲ್ಲಿ ಏಡ್ಸ್ ಕಾಯಿಲೆಯನ್ನು 2030ರ ಒಳಗೆ ಶೂನ್ಯಕ್ಕೆ ತರುವ ಉದ್ದೇಶ ಹೊಂದಲಾಗಿದೆ ಎಂದು ತಾಲೂಕು ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಹೇಳಿದರು.

    ಪಟ್ಟಣದ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಸ್ನೇಹಜ್ಯೋತಿ ಮಹಿಳಾ ಸಂಘ, ಗ್ರಾಮ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಏಡ್ಸ್ ರೋಗದ ಕುರಿತು ಹಲವರಿಗೆ ಮಾಹಿತಿ ಇರುವುದಿಲ್ಲ. ಉಚಿತವಾಗಿ ರಕ್ತ ಪರೀಕ್ಷೆ ಮಾಡಿ ಪಾಸಿಟಿವ್ ಬಂದವರಿಗೆ ಆಪ್ತ ಸಮಾಲೋಚನೆ ನಡೆಸಿ ಮತ್ತೊಬ್ಬರಿಗೆ ಹರಡದಂತೆ ಎಚ್ಚರವಹಿಸಲಾಗುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

    ಶಿಬಿರದಲ್ಲಿ ಎಚ್‌ಐವಿ, ಮಧುಮೇಹ, ರಕ್ತದೊತ್ತಡ, ಸಿಫಿಲಿಸ್ ಪರೀಕ್ಷೆ ನಡೆಸಲಾಯಿತು. 105ಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾದರು.
    ತಾಲೂಕು ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಮಹೇಶ್, ಸಮುದಾಯ ಆರೋಗ್ಯ ಅಧಿಕಾರಿ ನವಿತಾ, ಸುನಂದಾ, ಸೌಜನ್ಯಾ, ತಾಲೂಕು ಸಂಯೋಜಕ ಸಿದ್ದರಾಜು, ಬಿ. ಸ್ನೇಹಾ, ಜ್ಯೋತಿ, ಸಮಾಲೋಚಕಿ ಅರ್ಪಿತಾ, ವಿಮಲಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts