More

    ಗಗನಯಾನಕ್ಕೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳಿಗೆ 11 ತಿಂಗಳು ರಷ್ಯಾದಲ್ಲಿ ತರಬೇತಿ; ಕೇಂದ್ರ ಸಚಿವ ಜಿತೇಂದ್ರ ಸಿಂಗ್​

    ನವದೆಹಲಿ: ಭಾರತದ ಮುಂಬರುವ ಮಹಾತ್ವಾಕಾಂಕ್ಷಿ ಯೋಜನೆ ಮೊದಲ ಮಾನವ ಸಹಿತ ಗಗನಯಾನಕ್ಕೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳು ರಷ್ಯಾದಲ್ಲಿ 11 ತಿಂಗಳು ತರಬೇತಿ ಪಡೆಯಲಿದ್ದಾರೆ ಎಂದು ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್​ ತಿಳಿಸಿದ್ದಾರೆ.

    ಗಗನಯಾತ್ರಿಗಳ ತರಬೇತಿ ಜನವರಿ ಮೂರನೇ ವಾರದಿಂದ ಪ್ರಾರಂಭವಾಗಲಿದೆ.
    ರಷ್ಯಾದಲ್ಲಿ 11 ತಿಂಗಳು ತರಬೇತಿ ಪಡೆದ ಬಳಿಕ ಗಗನಯಾತ್ರಿಗಳು ಭಾರತದಲ್ಲಿ ನಿರ್ದಿಷ್ಟ ಹಂತದ ತರಬೇತಿ ಪಡೆಯುತ್ತಾರೆ. ಇಸ್ರೋದಿಂದ ವಿನ್ಯಾಸಗೊಳಿಸಲಾದ ಗಗನನೌಕೆಯಲ್ಲಿ ತರಬೇತಿ ನೀಡಲಾಗುತ್ತದೆ. ಅದನ್ನು ಹೇಗೆ ನಿರ್ವಹಸಿಬೇಕು ಎಂದು ಅವರಿಗೆ ಹೇಳಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸುಮಾರು 10,000 ಕೋಟಿ ರೂಪಾಯಿ ವೆಚ್ಚದ ಈ ಗಗನಯಾನ ಯೋಜನೆಯನ್ನು 2022ರಲ್ಲಿ ಲಾಂಚ್​ ಮಾಡಲು ಇಸ್ರೋ ಸಿದ್ಧವಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts