More

    ರೈತರನ್ನು ಚಿಂತೆಗೆ ದೂಡಿದ ಮಳೆ

    ಅಳವಂಡಿ: ಹಿಂಗಾರು ಹಂಗಾಮು ಪ್ರಾರಂಭವಾಗಿ ಕೆಲ ತಿಂಗಳು ಗತಿಸಿದರು ಮಳೆ ಬಾರದೆ ರೈತರನ್ನು ಚಿಂತೆಗೀಡು ಮಾಡಿತ್ತು. ಹಾಗೂ ಬಿತ್ತನೆಗೆ ಜಮೀನು ಹದಗೊಳಿಸಿ ಬಿತ್ತನೆ ಬೀಜ, ರಸಗೊಬ್ಬರವನ್ನು ಸಂಗ್ರಹಿಸಿ ರೈತರು ಸಿದ್ಧತೆ ಮಾಡಿಕೊಂಡಿದ್ದರು.

    ಇದನ್ನೂ ಓದಿ: ರಸನಿಮಿಷದಲ್ಲಿ ತನ್ಮಯನಾದಾಗ ಅನ್ಯಚಿಂತೆಗಳಿರದು

    ವಲಯದ ವ್ಯಾಪ್ತಿಯ ಕವಲೂರು, ಅಳವಂಡಿ, ಹಟ್ಟಿ, ಘಟ್ಟಿರಡ್ಡಿಹಾಳ, ಮುರ್ಲಾಪುರ, ಬೆಳಗಟ್ಟಿ ಮುಂತಾದ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದು ಕೆಲ ರೈತರನ್ನು ಆತಂಕಕ್ಕೆ ದೂಡಿದರೆ ಇನ್ನೂ ಕೆಲವರು ಹಿಂಗಾರು ಬಿತ್ತಬಹುದು ಎಂಬ ಆಶಾಭಾವದೊಂದಿಗೆ ಸಂತಸದಲ್ಲಿದ್ದಾರೆ.

    ಮುಂಗಾರು ಹಂಗಾಮಿನಲ್ಲಿ ಬಿತ್ತಿದ ಕೆಲ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ರೈತರು ಕಟಾವು ಮಾಡಿದ್ದಾರೆ. ಆದರೆ ರಾತ್ರಿ ಸುರಿದ ಮಳೆಯಿಂದ ಹರಗಿದ ಶೇಂಗಾದ ಬಳ್ಳಿ ಜಮೀನಿನಲ್ಲಿ ಇದ್ದುದರಿಂದ ತೊಯ್ದು ಕಪ್ಪಾಗಿದೆ. ಮೆಕ್ಕೆಜೋಳ ಕಟಾವು ಮಾಡಿದ್ದು ಅದನ್ನು ಒಣಗಿಸುವುದಕ್ಕೆ ಆಗದೆ ಬೆಳೆದ ಅಲ್ಪಸ್ವಲ್ಪ ಬೆಳೆನಾಶದ ಭೀತಿ ಎದುರಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts