More

    ರಸ್ತೆಯನ್ನೇ ಅಗೆದ ರೈತ!

    ಮುಳಗುಂದ: ವೇಗವಾಗಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ರೈತರೊಬ್ಬರು ರಸ್ತೆಯನ್ನೇ ಅಗೆದು ಹಂಪ್ಸ್ ನಿರ್ವಣಕ್ಕೆ ಮುಂದಾದ ಘಟನೆ ಗದಗ ತಾಲೂಕಿನ ಸೀತಾಲಹರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶಿರಹಟ್ಟಿ ತಾಲೂಕಿನ ಖಾನಾಪೂರ ಸಂರ್ಪಸುವ ರಸ್ತೆ ಇದಾಗಿದೆ. ಈ ರಸ್ತೆಯಲ್ಲಿ ಕ್ರಷರ್​ಗಳು ಹೆಚ್ಚಿದ್ದು, ಖಡಿ, ಎಂ ಸ್ಯಾಂಡ್ ಹೇರುವ ಟಿಪ್ಪರಗಳೇ ಹೆಚ್ಚಾಗಿ ಸಂಚರಿಸುತ್ತವೆ. ಈ ರಸ್ತೆಯಲ್ಲಿ ಹಂಪ್ಸ್ ಇಲ್ಲದ ಕಾರಣ ವಾಹನಗಳು ವೇಗವಾಗಿ ಸಂಚರಿಸುತ್ತವೆ.

    ಇದೇ ರಸ್ತೆಯಲ್ಲಿ ತಿರ್ಲಪ್ಪ ವಡ್ಡರ ಅವರ ತೋಟವಿದ್ದು, ವೇಗವಾಗಿ ಸಂಚರಿಸುವ ವಾಹನಗಳಿಂದ ಬೇಸತ್ತಿದ್ದಾರೆ. ತೋಟದ ಸಮೀಪ ಆಟವಾಡುವಾಗ ಇವರ ಮಗನಿಗೆ ಬೈಕ್ ಡಿಕ್ಕಿ ಹೊಡೆದು ಗಾಯವಾಗಿತ್ತು. ಹೀಗಾಗಿ ರೊಚ್ಚಿಗೆದ್ದ ತಿರ್ಲಪ್ಪ ಜೆಸಿಬಿಯಿಂದ ರಸ್ತೆಯನ್ನು ಮೂರು ಕಡೆ ಅಗೆದು, ಮಣ್ಣು ತುಂಬಿ ಹಂಪ್ಸ್ ನಿರ್ವಿುಸಿದ್ದಾರೆ.

    ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೆಲ ತಿಂಗಳ ಹಿಂದಷ್ಟೇ ಈ ರಸ್ತೆ ನಿರ್ವಿುಸಲಾಗಿದೆ. ರಸ್ತೆ ನಿರ್ವಿುಸುವಾಗ ಗುತ್ತಿಗೆದಾರನಿಗೆ ಹಂಪ್ಸ್ ಹಾಕುವಂತೆ ಮನವಿ ಮಾಡಿಕೊಂಡಿರೂ, ಗುತ್ತಿಗೆದಾರ ನಿರ್ಲಕ್ಷ್ಯ ಮಾಡಿದ್ದ ಎಂದು ತಿರ್ಲಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts