More

    ಬೆಲೆ ಕುಸಿತದಿಂದ ಕಂಗೆಟ್ಟು ಹಸಿಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ

    ಹಾವೇರಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ಹಸಿಮೆಣಸಿನಕಾಯಿ ಸಾಗಿಸಲು ಸಾಧ್ಯವಾಗದ ಪರಿಣಾಮ ದರದಲ್ಲಿ ತೀವ್ರ ಕುಸಿತವಾಗಿದ್ದು, ಇದರಿಂದ ನೊಂದ ರೈತನೊಬ್ಬ ತನ್ನ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನೇ ನಾಶಪಡಿಸಿದ್ದಾನೆ.

    ತಾಲೂಕಿನ ಹನುಮನಹಳ್ಳಿಯ ರೈತ ಚನ್ನಪ್ಪ ಕೋಡಿಹಳ್ಳಿ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಗುಂಟೂರ ಮೆಣಸಿನಕಾಯಿಯನ್ನು ಕಿತ್ತು ಹಾಕಿದ್ದಾನೆ. ಬೇಸಿಗೆ ಹಂಗಾಮಿನಲ್ಲಿ ಹಸಿಮೆಣಸಿನಕಾಯಿಗೆ ಉತ್ತಮ ದರ ಬರುವ ನಿರೀಕ್ಷೆಯಿಂದ 3 ಎಕರೆಯಲ್ಲಿ ಗುಂಟೂರ ತಳಿಯ ಮೆಣಸಿನಕಾಯಿಯನ್ನು ರೈತ ಬೆಳೆದಿದ್ದ.

    ಇದನ್ನೂ ಓದಿ: ಲಾರಿ ಚಾಲಕ-ಕ್ಲೀನರ್ ಟೆಸ್ಟ್ ಕುತೂಹಲ, ವರದಿ ಬರುವವರೆಗೂ ಜನತೆಗೆ ಆತಂಕ

    ಆದರೆ, ಮಾರ್ಚ್‌ನಲ್ಲಿ ಬೆಳೆ ಕಟಾವಿಗೆ ಬರುತ್ತಿದ್ದಂತೆ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಮಾರುಕಟ್ಟೆಗಳೆಲ್ಲ ಸ್ಥಗಿತಗೊಂಡವು. ಇದರಿಂದ ಹಸಿಮೆಣಸಿನಕಾಯಿ ಅದರಲ್ಲಿಯೂ ಅತಿಹೆಚ್ಚು ಖಾರ ಬರುವ ಗುಂಟೂರ ತಳಿ ಮೆಣಸಿನಕಾಯಿಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲವಾಯಿತು. ಹೀಗಾಗಿ ಕ್ವಿಂಟಾಲ್‌ಗೆ 1 ಸಾವಿರ ರೂ.ಗಳ ದರವೂ ಬೆಳೆಗೆ ಸಿಗದಂತಾಯಿತು.

    ಜಿಲ್ಲೆಯಲ್ಲಿ ಬೆಳೆಯುವ ಅತಿಹೆಚ್ಚು ಖಾರವಿರುವ ಗುಂಟೂರ ತಳಿಯ ಮೆಣಸಿನಕಾಯಿ ಸ್ಥಳೀಯ ಮಾರುಕಟ್ಟೆಗಿಂತ ದುಬೈ ಮಾರುಕಟ್ಟೆಯನ್ನು ಹೆಚ್ಚಾಗಿ ಅವಲಂಬಿಸಿತ್ತು. ಹಾವೇರಿಯಿಂದ ಮುಂಬೈ, ಮಂಗಳೂರು ಮೂಲಕ ದುಬೈಗೆ ಈ ಮೆಣಸಿನಕಾಯಿ ರಫ್ತಾಗುತ್ತಿತ್ತು.

    ಇದನ್ನೂ ಓದಿ: ದೂರದಿಂದಲೇ ಮಕ್ಕಳತ್ತ ಕೈ ಬೀಸಿ ಕಣ್ಣೀರಾದ ಪಾಲಕರು…

    ಲಾಕ್‌ಡೌನ್‌ನಿಂದ ಎಲ್ಲವೂ ಸ್ಥಗಿತಗೊಂಡ ಪರಿಣಾಮ ಗುಂಟೂರ ತಳಿ ಮೆಣಸಿನಕಾಯಿಯನ್ನು ಕೇಳುವವರೇ ಇಲ್ಲವಾಯಿತು. ಸ್ಥಳೀಯ ಮಾರುಕಟ್ಟೆಯಲ್ಲಿಯೂ ಇದನ್ನು ಯಾರೂ ಖರೀದಿಸಲಿಲ್ಲ. ಇದರಿಂದ ಅನಿವಾರ್ಯವಾಗಿ ಇದನ್ನು ತೆಗೆದು ಪರ್ಯಾಯ ಬೆಳೆ ಬೆಳೆಯಲು ಮುಂದಾಗಿದ್ದೇನೆ ಎಂದು ರೈತ ಚನ್ನಪ್ಪ ಕೋಡಿಹಳ್ಳಿ ತಿಳಿಸಿದ್ದಾರೆ.
    ಸರ್ಕಾರ ಹೂವು ಬೆಳೆಗೆ ೋಷಿಸಿದಂತೆ ಹಸಿಮೆಣಸಿನಕಾಯಿಗೂ ಪರಿಹಾರ ೋಷಿಸಿದ್ದು, ಅದನ್ನಾದರೂ ಕೂಡಲೆ ನೀಡಿದರೆ ಮುಂದಿನ ಬೆಳೆ ಬೆಳೆಯಲು ಅನುಕೂಲವಾಗಲಿದೆ.

    ರಾಹುಲ್​ ಗಾಂಧಿ ಮಾತನಾಡಿಸಿದ್ದಕ್ಕೆ ವಲಸೆ ಕಾರ್ಮಿಕರ ಬಂಧನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts