More

    ನಾಯಕರ ಭಾವಚಿತ್ರ ಮರೆಮಾಡದ ಚುನಾವಣಾ ಆಯೋಗ

    ಬೆಂಗಳೂರು: ರಾಜಧಾನಿಯಲ್ಲಿರುವ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ನೀತಿ ಸಂಹಿತೆ ಪಾಲನೆಗೆ ಒತ್ತು ನೀಡಲಾಗಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿರುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ವಿವಿಧ ನಾಯಕರ ಭಾವಚಿತ್ರವನ್ನು ಮರೆಮಾಡಲು ಚುನಾವಣಾ ಸಿಬ್ಬಂದಿ ಮೀನ-ಮೇಷ ಎಣಿಸಿರುವಂತಿದೆ.

    ನಗರದ ಒಳ ಭಾಗದಲ್ಲಿರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಉದ್ಯಾನ, ಆಟದ ಮೈದಾನ ಸೇರಿ ವಿವಿಧ ಸ್ಥಳಗಳಲ್ಲಿ ಅಧಿಕಾರದಲ್ಲಿದ್ದಾಗ ಆಯಾ ಪಕ್ಷಗಳು ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ವೇಳೆ ಹಾಕಲಾಗಿರುವ ನಾಮಲಕಗಳಲ್ಲಿ ಮುಖಂಡರು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರುಗಳಿದ್ದವು. ಇವುಗಳನ್ನು ಚುನಾವಣೆ ೋಷಣೆಯಾದ ಬಳಿಕ ಮರೆಮಾಚಲಾಗಿದೆ. ಆದರೆ, ಹೊರವಲಯದ ಹಲವೆಡೆ ಇನ್ನೂ ಅಂತಹ ಲಕಗಳನ್ನು ಮರೆಮಾಚದೆ ಹಾಗೆಯೇ ಬಿಡಲಾಗಿದೆ. ಇವುಗಳು ಬಡಾವಣೆಗಳ ಒಳ ಭಾಗದಲ್ಲಿರುವ ಕಾರಣ ಚುನಾವಣಾ ಸಿಬ್ಬಂದಿಯ ಕಣ್ಣಿಗೆ ಬಿದ್ದಂತಿಲ್ಲ.

    ಕ್ಯಾಂಟೀನ್‌ಗಳಲ್ಲಿ ಇಂದಿರಾ ಚಿತ್ರ ಮರೆಗೆ ಹಿಂದೇಟು:

    ನಗರದ ಎಲ್ಲ ವಾರ್ಡ್‌ಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳು ಕಾರ್ಯಾಚರಿಸುತ್ತಿವೆ. ಇವೆಲ್ಲವೂ ಮುಖ್ಯರಸ್ತೆಗಳಲ್ಲೇ ನಿರ್ಮಿಸಲ್ಪಟ್ಟಿದ್ದು, ಸಾರ್ವಜನಿಕ ಸ್ಥಳವಾಗಿ ಮಾರ್ಪಟ್ಟಿದೆ. ಈ ಎಲ್ಲ ಕ್ಯಾಂಟೀನ್‌ಗಳ ಮೇಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರವನ್ನು ಬೃಹತ್ ಆಗಿ ಪ್ರದರ್ಶಿಸಲಾಗಿದೆ. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಇವುಗಳನ್ನು ಮರೆಮಾಡಿದ್ದರೂ, ಈ ಬಾರಿ ಲೋಕಸಭಾ ಚುನಾವಣೆ ವೇಳೆ ಹಾಗೆಯೇ ಬಿಡಲಾಗಿದೆ.

    ಬಿಬಿಎಂಪಿ ಕೇಂದ್ರ ಕಚೇರಿ ಹೊಂದಿರುವ ಸಂಪಂಗಿರಾಮನಗರ ವಾರ್ಡ್‌ನ ಇಂದಿರಾ ಕ್ಯಾಂಟೀನ್ ಕಟ್ಟಡದ ಮೇಲಿರುವ ಮಾಜಿ ಪ್ರಧಾನಿಯವರ ಭಾವಚಿತ್ರವನ್ನು ಮರೆ ಮಾಡಲಾಗಿದೆ. ಇದೇ ರೀತಿ ಹಲವೆಡೆಯಿರುವ ಕ್ಯಾಂಟೀನ್‌ಗಳಲ್ಲಿರುವ ಇಂದಿರಾ ಚಿತ್ರವನ್ನು ಜನರಿಗೆ ಕಾಣದಂತೆ ಮುಚ್ಚಲಾಗಿದೆ. ಆದರೂ, ಗಾಂಧಿನಗರ ವಾರ್ಡ್, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್, ಕೋಗಿಲು ವಾರ್ಡ್ ಸೇರಿ ಹಲವು ಕ್ಯಾಂಟೀನ್ ಮೇಲಿರುವ ಭಾವಚಿತ್ರಗಳನ್ನು ಮರೆ ಮಾಡದೆ ಪಾಲಿಕೆಯ ಚುನಾವಣಾ ಸಿಬ್ಬಂದಿ ತಾರತಮ್ಯ ಮಾಡಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ.

    ಜಾಹೀರಾತು ಫ್ಲೆಕ್ಸ್‌ಗಳಿಗೆ ಬ್ರೇಕ್:

    ರಾಜಧಾನಿಯಲ್ಲಿ ಜಾಹೀರಾತು ಫ್ಲೆಕ್ಸ್ ಹಾವಳಿಗೆ ಜನ ಬೇಸತ್ತಿದ್ದಾರೆ. ಹೈಕೋರ್ಟ್ ಆದೇಶದ ಹೊರತಾಗಿಯೂ ್ಲೆಕ್ಸ್ ಅಳವಡಿಕೆಗೆ ಬ್ರೇಕ್ ಬಿದ್ದಿರಲಿಲ್ಲ. ಆದರೆ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರು ಹಾಕಿದ್ದ ಫ್ಲೆಕ್ಸ್‌ಗಳನ್ನು ಬಿಬಿಎಂಪಿ ತೆರವು ಮಾಡಿದೆ. ಕಳೆದೊಂದು ವಾರದಿಂದ ಹೊಸದಾಗಿ ಫ್ಲೆಕ್ಸ್‌ಗಳನ್ನು ಹಾಕಲು ಪಾಲಿಕೆ ಅನುಮತಿ ನೀಡಿಲ್ಲ. ಫ್ಲೆಕ್ಸ್ ಹಾಕಿದರೆ ಅದರ ವೆಚ್ಚವನ್ನು ಅಭ್ಯರ್ಥಿ ಅಥವಾ ಪಕ್ಷಕ್ಕೆ ಜಮೆ ಮಾಡಲಾಗುತ್ತದೆ ಎಂಬ ಅಂಜಿಕೆಯಿಂದ ಯಾರೂ ಜಾಹೀರಾತು ಲಕ ಅಳವಡಿಸುವ ಯತ್ನ ಮಾಡಿಲ್ಲ. ಇದರಿಂದ ನಗರದ ಬಹುತೇಕ ಪ್ರದೇಶ ತಾತ್ಕಾಲಿಕವಾದರೂ ಫ್ಲೆಕ್ಸ್‌ಮುಕ್ತ ಆದಂತಿದೆ. ಚುನಾವಣಾ ಸಂದರ್ಭದಲ್ಲಾದರೂ ಕಣ್ಣಿಗೆ ರಾಚುತ್ತಿದ್ದ ಫ್ಲೆಕ್ಸ್‌ಗಳಿಗೆ ಕಡಿವಾಣ ಬಿದ್ದಿರುವುದು ಸಮಾಧಾನ ತಂದಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts