More

    ವಾಹನ ಸವಾರರಿಗೆ ಧೂಳಿನ ಮಜ್ಜನ!

    ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಿಂದ ಗದಗ ಸಂರ್ಪಸುವ (ಕೈಗಾ-ಇಳಕಲ್) ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ರಸ್ತೆಗೆ ನೀರು ಹಾಕದ್ದರಿಂದ ರಸ್ತೆಯದ್ದಕ್ಕೂ ಧೂಳು ಆವರಿಸುತ್ತಿದೆ. ರಸ್ತೆ ಪಕ್ಕದ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾಳಾಗುತ್ತಿವೆ.

    ರಸ್ತೆ ಸಂಪೂರ್ಣ ಹದೆಗೆಟ್ಟಿದ್ದರಿಂದ ಸುಮಾರು 2.5 ಕಿ.ಮೀ ನಷ್ಟು ಅಭಿವೃದ್ಧಿಗೊಳಿಸುವ ಕಾರ್ಯ ಕಳೆದ 1 ವಾರದಿಂದ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳ ಹಿಂದೆ ದಟ್ಟಮಂಜು ಕವಿದಂತೆ ಧೂಳು ಆವರಿಸಿಕೊಳ್ಳುತ್ತದೆ. ಮುಖ್ಯವಾಗಿ ರಸ್ತೆಯಲ್ಲಿ ಎಂ ಸ್ಯಾಂಡ್, ಕಡಿಯನ್ನು ನಿಯಮ ಮೀರಿದ ಭಾರದೊಂದಿಗೆ ಸಾಲುಗಟ್ಟಿ ಸಂಚರಿಸುವ ಟಿಪ್ಪರ್, ಲಾರಿಗಳ ಅಬ್ಬರದಿಂದ ಅಪಾರ ಪ್ರಮಾಣ ಧೂಳು ಏಳುತ್ತಿದೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ, ಬೈಕ್ ಸವಾರರು, ರೈತರಿಗೆ ರಸ್ತೆ ಕಾಣದಂಥ ಪರಿಸ್ಥಿತಿ ನಿರ್ವಣವಾಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

    ರಸ್ತೆ ಎರಡೂ ಬದಿ ಬೆಳೆದು ನಿಂತಿರುವ ಜೋಳ, ಕಡಲೆ, ಗೋದಿ ಇತರೆ ಬೆಳೆಗಳು ಧೂಳಿನಿಂದ ಹಾಳಾಗುತ್ತಿವೆ. ಗುತ್ತಿಗೆದಾರರು ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ನಿಯಮಿತವಾಗಿ ನೀರು ಸಿಂಪಡಿಸಬೇಕು ಎಂದು ರೈತ ವಿರೂಪಾಕ್ಷ ಆದಿ, ಸೋಮನಗೌಡ ಪಾಟೀಲ ಆಗ್ರಹಿಸಿದ್ದಾರೆ.

    ಗುತ್ತಿಗೆದಾರರಿಗೆ ನಿಯಮಿತವಾಗಿ ರಸ್ತೆಗೆ ನೀರು ಹಾಕಿ ಧೂಳಿನ ಸಮಸ್ಯೆಯಾಗದಂತೆ ಸೂಚಿಸಲಾಗಿದೆ. ಅಲ್ಲದೆ, ಗುಣಮಟ್ಟದ ಕಾಮಗಾರಿ ಮಾಡುವಂತೆ ಮತ್ತು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಿಗಾ ವಹಿಸಲಾಗುತ್ತದೆ.

    | ನರೇಂದ್ರ ಡಿ.ಬಿ, ಪಿಡಬ್ಲ್ಯುಡಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts