More

    ರೈಲ್ವೆ ನಿಲ್ದಾಣದ ಬಾಕಿ ಕಾಮಗಾರಿ ಶೀಘ್ರ ಮುಗಿಸಿ

    ಸಾಗರ: ರಾಜ್ಯದಲ್ಲಿ 55 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಮೂಲಕ ಫೆ.26ರಂದು ಉದ್ಘಾಟಿಸಲಿದ್ದಾರೆ. ಅಷ್ಟರೊಳಗೆ ಇನ್ನುಳಿದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ಸಹಾಯಕ ವಿಭಾಗೀಯ ಅಭಿಯಂತರ ಹರಿರಾಮ್ ಮೀನಾ ಸೂಚಿಸಿದರು.

    ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಾಗರ ಜಂಬಗಾರು ರೈಲ್ವೆ ನಿಲ್ದಾಣವನ್ನು ಮರು ನಿರ್ಮಿಸಲಾಗುತ್ತಿದೆ. ಪ್ಲಾಟ್‌ಫಾರ್ಮ್ ರಿಪೇರಿ, ಮೇಲ್ಛಾವಣಿ ದುರಸ್ತಿ, ಅಂಡರ್ ಬ್ರಿಡ್ಜ್, ಸಂಪರ್ಕ ರಸ್ತೆ ನಿರ್ಮಿಸಲಾಗುತ್ತದೆ. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ ಎಂದರು.
    ಸಾಗರ ಮಾತ್ರವಲ್ಲದೆ ತಾಳಗುಪ್ಪ, ಅರಸಾಳು, ಶಿವಮೊಗ್ಗ ರೈಲ್ವೆ ನಿಲ್ದಾಣವನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಎಲ್ಲ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ ಎಂದರು.
    ರೈಲ್ವೆ ಇಲಾಖೆಯ ವಾಣಿಜ್ಯ ಅಧೀಕ್ಷಕ ಮಂಜುನಾಥ್, ಎಲೆಕ್ಟ್ರಿಕ್ ವಿಭಾಗದ ಅಭಿಷೇಕ್, ಸಂತೋಷ್, ಅಕ್ಷಯ ಕುಮಾರ್, ಚಂದ್ರಕಾಂತ್, ಸಾಗರ ರೈಲ್ವೆ ಹೋರಾಟ ಸಮಿತಿಯ ಕುಮಾರಸ್ವಾಮಿ, ಗುರುತೀರ್ಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts