More

    ಬಸ್ ಅಲಂಕರಿಸಿ ಕನ್ನಡ ಪ್ರೇಮ ಮೆರೆದ ಚಾಲಕ

    ಕರಜಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಫಜಲಪುರ ಡಿಪೋದ ಚಾಲಕ ನಾಗಪ್ಪ ಉಪ್ಪಿನ್ ಅವರು ಕಳೆದ 12 ವರ್ಷಗಳಿಂದ ರಾಜ್ಯೋತ್ಸವದಂದು ಬಸ್ಸಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿ ಕನ್ನಡ ಪ್ರೇಮ ಮೆರೆಯುತ್ತಿದ್ದಾರೆ.

    ಕರ್ನಾಟಕದ ಜಿ¯್ಲೆಗಳ ಜತೆಗೆ ಪ್ರವಾಸಿ ತಾಣಗಳ ಚಿತ್ರ, ಪ್ರಮುಖ ಕವಿಗಳು, ಮಹಾಪುರುಷರು, e್ಞÁನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರ ಸೇರಿ ಬಸ್ ಅನ್ನು ಸಂಪೂರ್ಣ ಕನ್ನಡಮಯವಾಗಿಸಿz್ದÁರೆ. ಅಲ್ಲದೆ ಮೈಕ್ ಅಳವಡಿಸಿದ್ದು, ಕನ್ನಡ ಗೀತೆಗಳ ಮೂಲಕ ಜನರಲ್ಲಿ ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

    ಮಣ್ಣೂರಿನಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ನಾಗಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಮುಖರಾದ ಮಹಾದೇವಪ್ಪ ಕರೂಟಿ, ರಾಚಪ್ಪ ಕೊಪ್ಪಾ, ಗುರುಬಾಳ ಜಕಾಪುರ, ಸೂರ್ಯಕಾಂತ ಮಗಿ, ಅಶೋಕ ಬೇನೂರ, ದಾನಪ್ಪ ಪೂಜಾರಿ, ಗೋಪಾಳ ಚೋಪಡೆ, ಚಂದ್ರಕಾAತ ಹಳಗೋದಿ, ಮಹೇಶ ಪ್ಯಾಟಿ, ವೇಣುಮಾಧವ ಅವಧಾನಿ, ಜಗದೀಶ ದೇಶೆಟ್ಟಿ, ಸುರೇಶ ಕೆ., ಅಶೋಕ, ಬಸವರಾಜ ಅಳ್ಳಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts