More

    ಸೋರಿಕೆಯಾದ ಪತ್ರಿಕೆ ನೀಡಿ ಪರೀಕ್ಷೆ ನಡೆಸಿದ ಇಲಾಖೆ!

    ತುಮಕೂರು: ಪ್ರಥಮ ಪಿಯು ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ತಪ್ಪು ಮುಚ್ಚಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅದೇ ಪತ್ರಿಕೆ ನೀಡಿ ಪರೀಕ್ಷೆ ನಡೆಸಿದೆ.

    ಪರೀಕ್ಷೆಗೂ ಪೂರ್ವದಲ್ಲಿಯೇ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರೂ ‘ಸ್ಪಷ್ಟತೆ’ಯಿಲ್ಲ ಎಂಬ ವಾದಕ್ಕಿಳಿದಿದ್ದ ಇಲಾಖೆ, ಅದೇ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆ ನಡೆಸಿರುವುದು ಶೈಕ್ಷಣಿಕ ವಲಯದ ಆತಂಕ ಹೆಚ್ಚಿಸಿದೆ.

    ಬುಧವಾರ ನಡೆದಿರುವ ಪ್ರಥಮ ಪಿಯುಸಿ ಭೌತಶಾಸ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಂಗಳವಾರವೇ ಹರಿದಾಡಿದೆ.

    ಈ ಬಗ್ಗೆ ಪತ್ರಿಕೆಗಳು ಡಿಡಿಪಿಯು ಗಂಗಾಧರ್ ಅವರ ಗಮನಕ್ಕೆ ತಂದಿದ್ದರೂ ಪರೀಕ್ಷೆ ನಡೆಸಿದ್ದಾರೆ.

    ಪರೀಕ್ಷೆಗೂ ಪೂರ್ವದಲ್ಲಿಯೇ ಪ್ರಶ್ನೆಪತ್ರಿಕೆ ಸಿಕ್ಕಿದ್ದ ವಿದ್ಯಾರ್ಥಿಗಳು ಖುಷಿಯಾಗಿ ಪರೀಕ್ಷೆಗೆ ಹಾಜರಾದರೆ, ಪ್ರಾಮಾಣಿಕವಾಗಿ ಓದಿದ್ದ ವಿದ್ಯಾರ್ಥಿಗಳು ವ್ಯವಸ್ಥೆ ವಿರುದ್ಧ ಬೇಸರದಿಂದಲೇ ಪರೀಕ್ಷೆ ಬರೆದರು.

    ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಯಾವುದೇ ಆಧಾರಗಳಿಲ್ಲ. ಹಾಗಾಗಿ, ಪರೀಕ್ಷೆ ನಡೆಸಲಾಗಿದೆ. ಆದರೆ, ಇಂಗ್ಲಿಷ್ ಪತ್ರಿಕೆ ಸೋರಿಕೆಯಾಗಿತ್ತು, ಈ ಬಗ್ಗೆ ಪಿಯು ಇಲಾಖೆಯ ಗಮನಕ್ಕೆ ತಂದು ಪೊಲೀಸರಿಗೆ ದೂರು ನೀಡಲಾಗಿದೆ.
    ಗಂಗಾಧರ್ ಡಿಡಿಪಿಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts