More

    ಡೆಡ್ಲಿ ಕರೊನಾಕ್ಕೆ ಇಟಲಿಯಲ್ಲಿ ಒಂದೇ ದಿನದಲ್ಲಿ 250 ಬಲಿ: ಸಾವಿನ ಸಂಖ್ಯೆ 1266ಕ್ಕೆ ಏರಿಕೆ

    ರೋಮ್​: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ಪೂರ್ತಿ ಪ್ರಪಂಚವನ್ನೇ ಆವರಿಸಿಕೊಳ್ಳುತ್ತಿದೆ. ಚೀನಾದಲ್ಲಿ 3000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ವೈರಸ್​ ಇಟಲಿಯಲ್ಲಿ ತನ್ನ ಯಮರೂಪವನ್ನು ತೋರಿಸಲಾರಂಭಿಸಿದೆ. ಇಟಲಿಯಲ್ಲಿ ಒಂದೇ ದಿನದಲ್ಲಿ 250 ಜನರು ವೈರಸ್​ನಿಂದಾಗಿ ಮೃತರಾಗಿರುವುದು ವರದಿಯಾಗಿದೆ.

    ನಿನ್ನೆ (ಮಾ.130) ಇಟಲಿಯಲ್ಲಿ 250 ಜನರು ಕರೊನಾ ವೈರಸ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ದಿನದಲ್ಲಿ ಸಾವಿನ ಪ್ರಮಾಣ ಶೇ. 25 ಏರಿಕೆಯಾಗಿದ್ದು ಈವರೆಗೆ ಸತ್ತವರ ಸಂಖ್ಯೆ 1,266ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿಯೂ ಸಹ ಶೇ.17 ಏರಿಕೆ ಕಂಡಿದ್ದು, 17,660 ಜನರಲ್ಲಿ ಸೋಂಕಿರುವುದು ಧೃಡವಾಗಿದೆ.

    ಇಟಲಿಯಲ್ಲಿ ಫೆ.21ರಂದು ಮೊದಲ ಕರೊನಾ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಸಾವಿರಾರು ಜನರು ಆಸ್ಪತ್ರೆಗಳಲ್ಲಿ ಕರೊನಾ ವೈರಸ್​ಗೆ ಚಿಕಿತ್ಸೆ ಪಡೆಯುತ್ತಿದ್ದು, 1,258 ಜನರು ಗುಣಮುಖರಾಗಿದ್ದಾರೆ. 1,328 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ನನ್ನ ಬರ್ತ್​ಡೇಗೆ ಇದೇ ಗಿಫ್ಟ್​ ಕೊಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡ ಅಪ್ಪು

    ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ ಅಮೆರಿಕ: ಮುಂದಿನ 8 ವಾರ ನಿರ್ಣಾಯಕ ಎಂದ ಅಧ್ಯಕ್ಷ ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts