More

    ಇದ್ದಕ್ಕಿದ್ದಂತೆ ಬೆಟ್ಟದಲ್ಲಿದ್ದ ಮರಗಳು ಮಾಯ! ಕೂಗಳತೆ ದೂರದಲ್ಲೇ ಇದೆ ಅರಣ್ಯ ಇಲಾಖೆ ಕಚೇರಿ

    ಹುಬ್ಬಳ್ಳಿ: ಇಲ್ಲಿಯ ವಿಶ್ವೇಶ್ವರನಗರ ಸಮೀಪದ ನ್ರುಪತುಂಗ ಬೆಟ್ಟದಲ್ಲಿ ಹಚ್ಚ ಹಸಿರಿನಿಂದ ಕೂಡಿದ್ದ ನೂರಾರು ಗಿಡಗಳನ್ನು ಕಡಿದು ಹಾಕಿದ ಅಮಾನವೀಯ ಘಟನೆ ಭಾನುವಾರ ಸಂಜೆ ನಡೆದಿದೆ.ಬೆಳಗ್ಗೆ ಇದ್ದ ಮರಗಳು ಸಂಜೆಯೊಳಗೆ ನಾಪತ್ತೆಯಾಗಿವೆ.

    ಬೆಟ್ಟದ ಸಮೀಪವೇ ಕೂಗಳತೆಯಲ್ಲಿ ಅರಣ್ಯ ಇಲಾಖೆ ಕಚೇರಿ ಇದ್ದರೂ ಹಾಡಹಗಲೇ ನೂರಾರು ಗಿಡಮರಗಳಿಗೆ ಕೊಡಲಿ ಏಟು ನೀಡಿರುವುದು ಪರಿಸರ ಪ್ರೇಮಿಗಳ ಹಾಗೂ ಬೆಟ್ಟಕ್ಕೆ ಬರುವ ವಾಯವಿಹಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಇತ್ತೀಚಿನ ದಿನಗಳಲ್ಲಿ ಆಡು, ಕುರಿ ಮೇಯಿಸುವವರು ಬೆಟ್ಟಕ್ಕೆ ತಮ್ಮ ಕುರಿಗಳನ್ನು ಮೇಯಿಸಲು ಬರುತ್ತಿದ್ದು, ರಾಜಾರೋಷವಾಗಿ ಗಿಡಮರಗಳನ್ನು ಕಡಿದು ಹಾಕುತ್ತಿದ್ದಾರೆ. ಸೋಮವಾರ ಬೆಟ್ಟಕ್ಕೆ ಬಂದ ನೂರಾರು ಜನರು ಘಟನೆ ಕಂಡು ದಿಗ್ಭ್ರಮೆ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯವರು ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ಆಗ್ರಹಿಸಿದ್ದಾರೆ.

    ಸೇತುವೆಯಿಂದ ಏಕಾಏಕಿ ನದಿಗೆ ಉರುಳಿತು ಬಸ್​: 13 ಜನರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts