More

    ದಾಖಲಾತಿ ಕೊಟ್ಟರಷ್ಟೇ ಕೋವಿಡ್ ಲಸಿಕೆ

    ಹುಬ್ಬಳ್ಳಿ: ದಾಖಲಾತಿಗಳನ್ನು ಕೊಟ್ಟರೆ ಮಾತ್ರ ಸಿಗಲಿದೆ ಕೋವಿಡ್ ಲಸಿಕೆ…

    ಹೀಗೊಂದು ಸಂದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರವಾನಿಸಿದೆ. ಮೊದಲು, ಎರಡನೇ ಹಂತದ ಲಸಿಕೆ ವಿತರಣೆ ಪೂರ್ಣಪ್ರಮಾಣದಲ್ಲಿ ಮುಗಿದಿಲ್ಲ. ಈ ಮಧ್ಯೆ ಮೂರನೇ ಹಂತದ ಲಸಿಕೆ ವಿತರಣೆ ಧಾರವಾಡ ಜಿಲ್ಲಾದ್ಯಂತ ಮಾ. 1ರಿಂದ ಶುರುವಾಗಲಿದೆ. ಮೊದಲು ಮತ್ತು ಎರಡನೇ ಹಂತದಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯದೆ ಇದ್ದವರು ಆಧಾರ್, ಮತದಾರ ಚೀಟಿಯನ್ನು ತೋರಿಸಲೇಬೇಕು. ಮೂರನೇ ಹಂತದಲ್ಲಿ 45-59 ವಯಸ್ಸಿನ ವಿವಿಧ ಕಾಯಿಲೆ ಉಳ್ಳವರಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತದೆ. ಅವರು ಕಾಯಿಲೆ ಇರುವ ಕುರಿತು ವೈದ್ಯರಿಂದ ದೃಢೀಕರಣ ಪತ್ರ ತರಬೇಕು.

    ಮೊದಲ ಹಂತದಲ್ಲಿ 16537 ಜನರು ಹೆಸರು ನೋಂದಾಯಿಸಿದ್ದರು. ಅದರಲ್ಲಿ 14836 ಜನರು ಲಸಿಕೆ ಪಡೆದಿದ್ದಾರೆ. ಎರಡನೇ ಹಂತದಲ್ಲಿ 14837 ಜನರು ಹೆಸರು ನೋಂದಾಯಿಸಿದ್ದು, 7175 ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಮೂರನೇ ಹಂತದಲ್ಲಿ ಸರ್ಕಾರಿ ಹಾಗೂ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆಗೆ ಚಾಲನೆ ಸಿಗಲಿದೆ. 45-59 ವಯಸ್ಸಿನವರು ತಮಗೆ ಕಾಯಿಲೆ ಇದ್ದುದ್ದನ್ನು ದೃಢೀಕರಿಸಬೇಕು. 60 ವಯಸ್ಸು ಮೇಲ್ಪಟ್ಟವರು ತಮ್ಮ ಜನ್ಮ ದಿನಾಂಕ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಆನ್​ಲೈನ್ ಮತ್ತು ಆಫ್​ಲೈನ್ ಮೂಲಕ ಹೆಸರು ನೋಂದಾಯಿಸಿದರೆ, ಕೋವಿಡ್ ಲಸಿಕೆ ವಿತರಿಸಲು ಅನುವು ಮಾಡಲಾಗುತ್ತದೆ.

    ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ

    ಕಿಮ್್ಸ, ಜಿಲ್ಲಾಸ್ಪತ್ರೆ, ಕುಂದಗೋಳ, ನವಲಗುಂದ, ಕಲಘಟಗಿ ತಾಲೂಕು ಆಸ್ಪತ್ರೆಗಳಲ್ಲಿ ಎಂದಿನಂತೆ ಲಸಿಕೆ ವಿತರಣೆಯಾಗಲಿದೆ. ಖಾಸಗಿ ಆಸ್ಪತ್ರೆಗಳಾದ ಧಾರವಾಡದ ಎಸ್​ಡಿಎಂ, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ವಿತರಣೆಯಾಗಲಿದೆ. ಈ ಎರಡೂ ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ ಭರಿಸಿ ಯಾರಾದರೂ ಕೋವಿಡ್ ಲಸಿಕೆ ಪಡೆಯಬಹುದು. 150 ರೂಪಾಯಿ ವ್ಯಾಕ್ಸಿನ್​ಗೆ ಇದ್ದರೆ, 100 ರೂಪಾಯಿ ನಿರ್ವಹಣೆ ವೆಚ್ಚವೆಂದು ನಿಗದಿಪಡಿಸಲಾಗಿದೆ. ವ್ಯಾಕ್ಸಿನ್ ಪಡೆಯುವ ಮೊದಲು ‘ಕೋವಿಡ್’ ಪೋರ್ಟ್​ಲ್ನಲ್ಲಿ ಹೆಸರು ನೋಂದಾಯಿಸಬೇಕು. ನೋಂದಣಿ ಸಂಖ್ಯೆಯ ಆಧಾರದಲ್ಲಿ ಜಿಲ್ಲಾಡಳಿತದಿಂದ ಆಸ್ಪತ್ರೆಗಳಿಗೆ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗಲಿದೆ.

    ಮೊದಲು ಮತ್ತು ಎರಡನೇ ಹಂತದಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯದವರಿಗೂ ವ್ಯಾಕ್ಸಿನ್ ಕೊಡಲಾಗುತ್ತಿದೆ. ಮೂರನೇ ಹಂತದ ಲಸಿಕೆ ವಿತರಣೆ ಆರಂಭವಾಗಲಿದೆ. ಕೋವ್ಯಾಕ್ಸಿನ್ ಪಡೆಯಲು ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ ದರ ನಿಗದಿಪಡಿಸಲಾಗಿದೆ.

    | ಡಾ.ಎಸ್.ಎಂ. ಹೊನಕೇರಿ, ಕೋವಿಡ್ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts