More

    ಸಂಸ್ಕೃತಿ, ಸಂಸ್ಕಾರ ಆಚರಣೆಯಿಂದ ದೇಶ ಸುಭದ್ರ

    ಬಾಳೆಹೊನ್ನೂರು: ದೇಶ ಭದ್ರವಾಗಿರಲು ಸಂಸ್ಕೃತಿ, ಸಂಸ್ಕಾರ ಆಚರಣೆ ಅಗತ್ಯವಾಗಿದೆ ಎಂದು ಬೀರೂರು ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ 31ನೇ ವರ್ಷದ ದೀಪೋತ್ಸವ, ಅನ್ನದಾನ ಹಾಗೂ ಜನ ಜಾಗೃತಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
    ಅಧ್ಯಾತ್ಮದ ಅಡಿಯಲ್ಲಿ ಕೆಲಸ ಮಾಡಿದರೆ ಮನುಷ್ಯ ಮಹಾದೇವನಾಗಬಲ್ಲ. ಸನಾತನ ಧರ್ಮ, ಪುರಾಣ, ಶಾಸ್ತ್ರ, ಸಂಪ್ರದಾಯ, ಇತಿಹಾಸ ಮುಂತಾದವು ಭಾರತದ ಅಡಿಪಾಯ ಎಂದರು.
    ಸನಾತನ ಪರಂಪರೆ ಉಳಿಸಲು ಶ್ರಮಿಸಬೇಕಿದ್ದು, ಇದಕ್ಕೆ ಪ್ರಮುಖವಾಗಿ ದೇಹ ದಂಡಿಸಬೇಕು. ಅಂಥ ದಂಡನೆ ಆಚರಣೆಯಲ್ಲಿ ಅಯ್ಯಪ್ಪಸ್ವಾಮಿ ವ್ರಥಾಚರಣೆಯೂ ಪ್ರಮುಖ. ಧರ್ಮ ವಿಶಾಲವಾಗಿದ್ದು, ಅದು ಎಂದಿಗೂ ಪ್ರಬುದ್ಧತೆ ಕಳೆದುಕೊಂಡಿಲ್ಲ. ವೇದಗಳು ನೀತಿಪಾಠದಿಂದ ಬದುಕು ಕಟ್ಟಿಕೊಟ್ಟಿವೆ ಎಂದು ಹೇಳಿದರು.
    ಶ್ರೀಶೈಲ ಶಾಖಾಮಠ ಮಾದೀಹಳ್ಳಿ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಧರ್ಮ ರಕ್ಷಣೆಯಲ್ಲಿ ತೊಡಗಬೇಕಿದ್ದು, ಪಾಲಕರು ಮಕ್ಕಳಿಗೆ ಧರ್ಮ ರಕ್ಷಣೆ ಕಲಿಸಬೇಕಿದೆ ಎಂದರು.
    ಅಯ್ಯಪ್ಪ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ಮಾತನಾಡಿ, ಅಯ್ಯಪ್ಪಸ್ವಾಮಿ ಧಾರ್ಮಿಕ ಸಭೆಯನ್ನು ಯಾವುದೇ ಪ್ರಚಾರ, ದುಂದು ವೆಚ್ಚಕ್ಕಾಗಿ ಮಾಡದೆ ಹಿಂದು ಸಂಸ್ಕೃತಿ, ಸಂಪ್ರದಾಯ ಉಳಿಸಲು ನಡೆಸಲಾಗುತ್ತಿದೆ. ಸುಮಾರು 3450 ಹಿಂದು ಮನೆಗಳನ್ನು ಸಂಪರ್ಕ ಮಾಡಿ ಭಕ್ತರಿಂದ ದವಸ, ಧಾನ್ಯ ಸಂಗ್ರಹಿಸಿ ಅನ್ನದಾನ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
    ರಂಗಕರ್ಮಿ ರಮೇಶ್ ಬೇಗಾರ್ ಅವರಿಗೆ ಅಯ್ಯಪ್ಪ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರನಟಿ ನಾಗಶ್ರೀ ಬೇಗಾರ್ ಅವರಿಗೆ ಅಯ್ಯಪ್ಪಸ್ವಾಮಿ ಗುರುರಕ್ಷೆ ನೀಡಲಾಯಿತು. ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್, ಅಪೂರ್ವ ಬ್ಯಾಂಕ್ ಸಿಇಒ ಕೆ.ಎಸ್.ಸುಧೀಂದ್ರ, ಪ್ರಮುಖರಾದ ಬಾಲಕೃಷ್ಣಗೌಡ, ನಾಗರಾಜ್, ಸಹದೇವ್ ಸಾಗರ್, ಕಮಲಮ್ಮ, ಕುಮಾರ್, ಬಿ.ಜಗದೀಶ್ಚಂದ್ರ, ಆರ್.ಎಸ್.ರುದ್ರಯ್ಯ, ಪಿ.ಕೆ.ಪ್ರಕಾಶ್, ಸಂದೀಪ್ ಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts