More

    ಹಳ್ಳಿಗಳ ಸ್ವಚ್ಛತೆಯಿಂದಲೂ ದೇಶ ಸುಂದರ

    ಚಿತ್ರದುರ್ಗ: ಪ್ರತಿ ಹಳ್ಳಿಗಳು ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಇಡೀ ದೇಶ ಸುಂದರವಾಗಿ ಕಂಗೊಳಿಸಲಿದೆ. ಅದಕ್ಕಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ಬಿಟ್ಟು ಗ್ರಾಮ ಪಂಚಾಯಿತಿ ವಾಹನಗಳಿಗೆ ಹಾಕಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

    ತಾಲೂಕಿನ ಜೆ.ಎನ್‌.ಕೋಟೆ ಗ್ರಾಮದಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿಯಿಂದ 15ನೇ ಹಣಕಾಸಿನ ಯೋಜನೆಯ‌ ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ಭಾನುವಾರ ಹಮ್ಮಿಕೊಂಡಿದ್ದ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಕಾಪಾಡುವ ಹಿತದೃಷ್ಟಿಯಿಂದ ಪಂಚಾಯಿತಿ ವ್ಯಾಪ್ತಿಯ ನೇರನಾಳ್, ಗೊಲ್ಲನಕಟ್ಟೆ, ಕಳ್ಳಿರಪ್ಪ, ಸಜ್ಜನಕೆರೆ, ಪಲ್ಲವಗೆರೆ, ಜೋಡಿಚಿಕ್ಕೇನಹಳ್ಳಿ, ಜೋಡಿಚಿಕ್ಕೇನಹಳ್ಳಿ ಲಂಬಾಣಿಹಟ್ಟಿ ಗ್ರಾಮ ಒಳಗೊಂಡು ಒಟ್ಟು 2,100 ಕುಟುಂಬಗಳಿಗೆ ಬುಟ್ಟಿ ನೀಡಲಾಗುತ್ತಿದ್ದು, ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

    ಬೇಯಿಸಿದ ಆಹಾರ, ಹಣ್ಣು, ತರಕಾರಿ, ಹೂವು, ಒಣ ಎಲೆ, ಪೇಪರ್‌, ಪ್ಲಾಸ್ಟಿಕ್‌ ಸೇರಿ ಕೊಳೆಯುವ ಹಾಗೂ ಕೊಳೆಯದ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ವಿಂಗಡಿಸಿ ಸ್ವಚ್ಛವಾಹಿನಿ ವಾಹನಗಳಲ್ಲೇ ಹಾಕಬೇಕು. ಮನೆಯ ಸುತ್ತಮುತ್ತ ಸುರಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ ಅವರು, ಹಿರಿಯ ನಾಗರಿಕ, ‌ಅಂಗವಿಕಲ, ವಿಧವಾ ವೇತನ ಸೇರಿ ಯಾವುದೇ ಪಿಂಚಣಿ ಸಮಸ್ಯೆ ಇದ್ದರೂ ಕೂಡಲೇ ಗಮನಕ್ಕೆ ತನ್ನಿ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಡಿ.ಮಲ್ಲಪ್ಪ, ತಾಲೂಕು ಪಂಚಾಯಿತಿ ಎಡಿ ಧನಂಜಯ, ಪಿಡಿಒ ಆರ್.ಡಿ.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts