More

    ಅವಿವಾಗೆ ಅಭಿಷೇಕ್​ ತೊಡಿಸಿದ ಉಂಗುರದ ಬೆಲೆ ಎಷ್ಟು?

    ಬೆಂಗಳೂರು: ಸ್ಯಾಂಡಲ್​ವುಡ್​ ನಟ ನಟ ಮತ್ತು ಅಂಬರೀಷ್​ ಅವರ ಮಗ ಅಭಿಷೇಕ್​ ಅಂಬರೀಷ್​ ಭಾನುವಾರವಷ್ಟೇ ತಮ್ಮ ಬಹುಕಾಲದ ಗೆಳತಿ ಅವಿವಾ ಬಿದ್ದಪ್ಪ ಅವರ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಗೊತ್ತಿರುವ ವಿಷಯವೇ. ಈ ಮಧ್ಯೆ, ಅವಿವಾಗೆ ಅಭಿಷೇಕ್​ ತೊಡಿಸಿದ ಉಂಗುರದ ಬೆಲೆ ಎಷ್ಟು?

    ಇದನ್ನೂ ಓದಿ: ಹಿರಿಯ ನಟ ನಂದಮೂರಿ ಬಾಲಕೃಷ್ಣಗೆ ಕನ್ನಡದ ಶ್ರೀಲೀಲಾ ನಾಯಕಿ! ಯಾವ ಚಿತ್ರ ಗೊತ್ತಾ?

    ಹೌದು, ಅವಿವಾಗೆ ಅಭಿಷೇಕ್​ ತೊಡಿಸಿದ ಉಂಗುರದ ಬೆಲೆ ಎಷ್ಟು ಎಂಬ ವಿಷಯ ಇದೀಗ ಚರ್ಚೆಯಾಗುತ್ತಿದ್ದು ಇದಕ್ಕೆ ಉತ್ತರ ಸಿಕ್ಕಿದೆ. ಇದೊಂದು ವಜ್ರದ ಉಂಗುರವಾಗಿದ್ದು, ಪೂಣೆಯಲ್ಲಿ ವಿಶೇಷವಾಗಿ ಈ ಉಂಗುರುವನ್ನು ಡಿಸೈನ್​ ಮಾಡಿಸಿ ತಂದಿದ್ದಾರೆ ಅಭಿಷೇಕ್​. ವಜ್ರದ ಉಂಗುರ ಎಂದ ಮೇಲೆ ಸಾಕಷ್ಟು ಖರ್ಚಾಗಿರಬಹುದು ಎಂಬ ನಿಮ್ಮ ಊಹೆ ಸರಿ. ಆದರೆ, ಎಷ್ಟು? ಮೂಲಗಳ ಪ್ರಕಾರ ಈ ಉಂಗುರಕ್ಕೆ 37 ಲಕ್ಷ ರೂ.ಗಳಂತೆ.

    ಅಭಿಷೇಕ್​ ಮತ್ತು ಅವಿವಾ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಈ ವಿಷಯ ಅಂಬರೀಷ್​ ಅವರಿಗೂ ತಿಳಿದಿತ್ತು ಎಂದು ಹೇಳಲಾಗುತ್ತದೆ. ಅವಿವಾ, ಖ್ಯಾತ ಫ್ಯಾಶನ್​ ಡಿಸೈನರ್​ ಪ್ರಸಾದ್​ ಬಿದ್ದಪ್ಪ ಅವರ ಮಗಳಾಗಿದ್ದು, ಫ್ಯಾಶನ್​ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಅಂಬರೀಷ್​ ಮತ್ತು ಪ್ರಸಾದ್​ ಬಿದ್ದಪ್ಪ ಕುಟುಂಬಗಳ ನಡುವೆ ಒಳ್ಳೆಯ ಗೆಳೆತನ ಇದೆ. ಈಗ ಈ ಗೆಳತನ ನೆಂಟಸ್ತಿಕೆಯಾಗಿ ಬದಲಾಗಿದೆ.

    ಇದನ್ನೂ ಓದಿ: ಅಭಿಷೇಕ್​ಗಿಂತ ಮೊದಲೇ ಅವಿವಾ ಸಿನಿಮಾದಲ್ಲಿ ನಟಿಸಿದ್ದರು ಗೊತ್ತಾ?

    ಅಂದಹಾಗೆ, ಆರ್​.ಟಿ. ನಗರದ ಫೋರ್​ ಸೀಸನ್ಸ್​ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಎರಡೂ ಕುಟುಂಬದವರ ಸಮ್ಮುಖದಲ್ಲಿ ನಡೆದ್ದಿದ್ದು, ಈ ಕಾರ್ಯಕ್ರಮದಲ್ಲಿ ಯಶ್​, ರಾಧಿಕಾ ಪಂಡಿತ್​, ರಾಕ್​ಲೈನ್​ ವೆಂಕಟೇಶ್​, ಪ್ರಜ್ವಲ್​ ದೇವರಾಜ್​, ಸಂಗೀತ ನಿರ್ದೇಶಕ ಗುರುಕಿರಣ್​, ಸಚಿವರಾದ ಡಾ. ಅಶ್ವತ್ಥ್​ನಾರಾಯಣ್​, ಆರ್​. ಅಶೋಕ್​, ಶಾಸಕ ಸತೀಶ್​ ರೆಡ್ಡಿ ಮುಂತಾದವರು ಈ ನಿಶ್ಚಿತಾರ್ಥದಲ್ಲಿ ಭಾಗವಹಿಸಿ, ಅಭಿಷೇಕ್​ ಮತ್ತು ಅವಿವಾ ಅವರಿಗೆ ಶುಭ ಹಾರೈಸಿದ್ದಾರೆ.

    PHOTO Gallery | ಮಾಡೆಲ್ ಅವಿವಾ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅಭಿಷೇಕ್ ಅಂಬರೀಷ್; ಇಲ್ಲಿವೆ ನೋಡಿ ಎಂಗೇಜ್ಮೆಂಟ್ ಫೋಟೋಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts