More

    ಗ್ರಾಮಗಳ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಕೊಡುಗೆ ಅಪಾರ

    ಹಿರೇಕೆರೂರ: ಗ್ರಾಮಗಳ ಅಭಿವೃದ್ಧಿಯಲ್ಲಿ ಧರ್ಮಸ್ಥಳದ ಕೊಡುಗೆ ಅಪಾರವಾಗಿದ್ದು, ಮಾನವ ಸಂಪನ್ಮೂಲ ಬಳಕೆಯಲ್ಲಿ ಧರ್ಮಸ್ಥಳ ಸಂಸ್ಥೆಯ ಮಾದರಿಗಳು ಅದ್ಭುತವಾಗಿವೆ ಎಂದು ತಹಸೀಲ್ದಾರ್ ಎಚ್. ಪ್ರಭಾಕರಗೌಡ ಹೇಳಿದರು.

    ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಹೂಳೆತ್ತಲಾದ ಗ್ರಾಮದ ಕೆರೆಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕೆರೆ ಅಭಿವೃದ್ಧಿಗೊಳಿಸುವಲ್ಲಿ ಧರ್ಮಸ್ಥಳ ಸಂಸ್ಥೆಯ ಜತೆಗೆ ಊರಿನ ಜನತೆ ಕೈಜೋಡಿಸಿ ಯಶಸ್ವಿಗೊಳಿಸಿರುವುದು ಸಂತೋಷದ ವಿಷಯವಾಗಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ತಿಪ್ಪಾಯಿಕೊಪ್ಪ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಅಭಿವೃದ್ಧಿ ಮತ್ತು ನಾಗರಿಕತೆ ಹೆಸರಿನಲ್ಲಿ ಪರಿಸರದ ಮೇಲೆ ನಿರಂತರ ದಬ್ಬಾಳಿಕೆ ಮಾಡಲಾಗುತ್ತಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ನಮ್ಮ ಪೂರ್ವಜರು ದೇವರ ಹೆಸರಿನಲ್ಲಿ ನೀರು, ಮರಗಿಡಗಳಿಗೂ ಪೂಜೆ ಮಾಡುವ ಸಂಪ್ರದಾಯ ಹೇಳಿಕೊಟ್ಟಿದ್ದರು. ಗ್ರಾಮಸ್ಥರು ಮತ್ತು ಗ್ರಾಪಂ ಸೇರಿ ಕೆರೆಯ ಕಲ್ಲು ಪಿಚಿಂಗ್ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಶ್ರಮ ವಹಿಸಿ, ಚನ್ನಳ್ಳಿ ಕೆರೆ ಚೆಂದದ ಕೆರೆಯಾಗಿ ರೂಪುಗೊಳ್ಳುವಂತಾಗಲಿ ಎಂದರು.

    ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ ಮಾತನಾಡಿ, ರಾಜ್ಯದ 617ನೇ ಈ ಕೆರೆ ಇಂದು ಲೋಕಾರ್ಪಣೆಯಾಗಿದೆ ಎಂದರು.

    ಹಾವೇರಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕುಸುಮಾ ಮಾಗನೂರ ಅಧ್ಯಕ್ಷತೆ ವಹಿಸಿದ್ದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ನಿಂಗಜ್ಜೆರ, ಉಪನ್ಯಾಸಕ ದೇವರಾಜ ಹಂಚಿನಮನಿ, ಪ್ರಗತಿಪರ ಕೃಷಿಕ ಹನುಮಂತಪ್ಪ ಮೇಗಳಮನಿ, ಒಕ್ಕೂಟ ಅಧ್ಯಕ್ಷೆ ಲಲಿತಾ ಮಠದ ಹಾಗೂ ಗ್ರಾಮಸ್ಥರು, ಯೋಜನೆಯ ಒಕ್ಕೂಟದ ಪದಾಧಿಕಾರಿಗಳು ಇದ್ದರು. ಯೋಜನಾಧಿಕಾರಿ ಮಂಜುನಾಥ ಎಂ., ಕೃಷಿ ಅಧಿಕಾರಿ ಧರ್ಮಪ್ಪ ಜೋಗೇರ, ಮೇಲ್ವಿಚಾರಕ ಕಿರಣ ಹಾಗೂ ಸೇವಾ ಪ್ರತಿನಿಧಿ ದಾಕ್ಷಾಯಿಣಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts