More

    ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ

    ಎನ್.ಆರ್.ಪುರ: ಕ್ರೈಸ್ತ ಸಮುದಾಯದವರು ಈ ದೇಶದ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
    ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಮಾಕೋಡಿನ ಸೆಂಟ್ ಸೆಬಾಸ್ಟಿನ್ ಚರ್ಚ್‌ನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ರೈಸ್ತ ಕ್ರೈಸ್ತ ಸಮುದಾಯ ದೇಶದ ಅಭಿವೃದ್ದಿಗೆ ಉತ್ತಮ ಸಹಕಾರ ನೀಡಿದೆ. ನಾನು ಈ ಹಿಂದೆ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಐವಾನ್ ಡಿಸೋಜ ಅವರಿಂದ ಸಮುದಾಯ ಭವನ ಹಾಗೂ ದೇವಾಲಯ ನಿರ್ಮಾಣಕ್ಕೆ 75 ಲಕ್ಷ ರೂ. ಅನುದಾನ ಕೊಡಿಸಲಾಗಿತ್ತು. ಶಾಸಕರ ನಿಧಿಯಿಂದ ಕುಡಿಯುವ ನೀರು ಹಾಗೂ ವಿದ್ಯುತ್ ವ್ಯವಸ್ಥೆಗೆ ಅನುದಾನ ನೀಡಲಾಗಿದೆ . ಈ ಬಾರಿ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕ್ರೈಸ್ತ ಸಮುದಾಯ ಸಹಕಾರ ನೀಡಿದ್ದಾರೆ ಎಂದರು.
    ಮಾಕೋಡು ಚರ್ಚ್ ಧರ್ಮ ಗುರು ರೆ.ಾ.ಜೋಸ್ ಮಾತನಾಡಿ, ಇಲ್ಲಿನ ಸಮುದಾಯ ಭವನ ನಿರ್ಮಾಣ ಹಾಗೂ ನೂತನ ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ 75 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿ ಕ್ರೈಸ್ತ ಸಮುದಾಯಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸದ್ದಿರಿ. ಚರ್ಚಗೆ ಅಡಿಗೆ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
    ಚರ್ಚ್‌ನ ಟ್ರಸ್ಟಿಗಳಾದ ಸಾಜು, ಡೇವೀಸ್, ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯರಾದ ಅಶ್ವಿನಿ, ರವೀಂದ್ರ, ಲಿಲ್ಲಿ, ಕಾಂಗ್ರೆಸ್ ಮುಖಂಡರಾದ ಎಸ್.ಡಿ.ರಾಜೇಂದ್ರ, ಕೆ.ಎಂ.ಸುಂದರೇಶ್, ಇ.ಸಿ.ಜೋಯಿ, ಸಾಜು, ದೇವಂತ್ ಗೌಡ, ಕೆ.ಎ.ಅಬೂಬಕರ್, ರಂಜುಎಲಿಯಾಸ್, ಅಜೇಶ್, ಶೃತಿ, ಪ್ರಶಾಂತ್, ಎಲ್ದೋ, ಎಲಿಯಾಸ್, ಸುಲೈಮಾನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts