More

    ಸಂವಿಧಾನ ಬದಲಾವಣೆಗೆ ಕೈ ಹಾಕಲು ನಾವು ಬಿಡುವುದಿಲ್ಲ: ಎಚ್.ಕೆ.ರಾಮಚಂದ್ರಪ್ಪ

    ದಾವಣಗೆರೆ: ಯಾರೇ ಆಡಳಿತದಲ್ಲಿದ್ದರೂ ಸಂವಿಧಾನ ಬದಲಾವಣೆಗೆ ಕೈ ಹಾಕಲು ನಾವು ಬಿಡುವುದಿಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಹೇಳಿದರು.

    ಪಕ್ಷದ ಜಿಲ್ಲಾ ಮಂಡಳಿಯಿಂದ ಇಲ್ಲಿನ ಪಂಪಾಪತಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

    ಅಂಬೇಡ್ಕರ್ ಅವರು ನೀಡಿದ ಸಂವಿಧಾನ ವಿಶ್ವಕ್ಕೇ ಮಾದರಿಯಾದುದು. ಎಲ್ಲ ವರ್ಗಕ್ಕೂ ಇದರ ಮುಖೇನ ಸಮಾನ ಹಕ್ಕು ನೀಡಲಾಗಿದೆ. ಈಗ ಅದೇ ಸಂವಿಧಾನಕ್ಕೆ ಕುತ್ತು ತರುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ. ಸಮ ಸಮಾಜಕ್ಕೆ ಬುನಾದಿ ಆಗಿರುವ ಸಂವಿಧಾನ ವಿರುದ್ಧ ಅಪಸ್ವರ ಸಲ್ಲದು ಎಂದರು.

    ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಬಸವಣ್ಣನವರು ಮೊದಲು ಸ್ವಾತಂತ್ರೃ ಕಲ್ಪಿಸಿದರೆ ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಹಕ್ಕುಗಳನ್ನು ಕಲ್ಪಿಸಿದರು. ಸಮತಾವಾದದ ಸಮಾಜದ ಕನಸು ಕಂಡಿದ್ದರು ಎಂದು ಸ್ಮರಿಸಿದರು.

    ಕೋವಿಡ್ ನಿಯಮಾವಳಿಗಳನ್ನು ಕಾರ್ಮಿಕರು, ಮುಖಂಡರೂ ತಪ್ಪದೇ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

    ಜಿಲ್ಲಾ ಖಜಾಂಚಿ ಆನಂದರಾಜ್, ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ಟಿ.ಎಸ್.ನಾಗರಾಜ, ಮಹ್ಮದ್ ಬಾಷಾ, ಮಹ್ಮದ್ ರಫಿಕ್, ಆವರಗೆರೆ ವಾಸು, ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ, ಎಂ.ಬಿ.ಶಾರದಮ್ಮ, ರುದ್ರಮ್ಮ, ಸರೋಜಮ್ಮ, ವಿಶಾಲಾಕ್ಷಮ್ಮ, ಮಲ್ಲಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts