More

    ಗ್ರಾಪಂ ಚುನಾವಣೆ ಮುಂದೂಡಿಕೆಗೆ ಕಾಂಗ್ರೆಸ್ ವಿರೋಧ.. ಹೋರಾಟದ ಎಚ್ಚರಿಕೆ ಕೊಟ್ಟ ಸಿದ್ದು!

    ಕೊಪ್ಪಳ: ಕರೊನಾ ನೆಪದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವುದನ್ನು ವಿರೋಧಿಸುತ್ತೇವೆ. ಒಂದು ವೇಳೆ ಚುನಾವಣೆ ನಡೆಯದಿದ್ದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಜತೆಗೆ ವಸತಿ ಸಚಿವ ಸೋಮಣ್ಣ ಮತ್ತು ಬಿ.ಸಿ. ಪಾಟೀಲ್​ ವಿರುದ್ಧ ಕಿಡಿಕಾರಿದರು.

    ಇದನ್ನೂ ಓದಿರಿ ಭೂಗತ ಪಾತಕಿ ರವಿ ಪೂಜಾರಿ ಆಪ್ತ ಗುಲಾಮ್ ಸಿಸಿಬಿ ಬಲೆಗೆ!

    ಕರೊನಾ ಕುರಿತು ಮಾತನಾಡೋಕೆ ಪಿಎಚ್‌ಡಿ ಮಾಡಬೇಕಿಲ್ಲ. ಸೋಂಕಿನ ಬಗ್ಗೆ ತಿಳಿದುಕೊಳ್ಳುವುದು ಕಾಮನ್​ಸೆನ್ಸ್‌. ಎಚ್ಚರಿಕೆ ವಹಿಸಿದರೆ ಸೋಂಕು ಹರಡುವುದಿಲ್ಲ ಎಂದು ಹೇಳುವ ಮೂಲಕ ಬಿ.ಸಿ. ಪಾಟೀಲ್​ಗೆ ಟಾಂಗ್​ ನೀಡಿದರು.

    ಚಿತ್ರದುರ್ಗದಲ್ಲಿ ವಸತಿ ಸಚಿವ ಸೋಮಣ್ಣ ಮಾಡಿದ್ದ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸೋಮಣ್ಣ ಯಾವ ಆರ್ಥಿಕ ತಜ್ಞ ರೀ? ಅವರಿಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಜ್ಞಾನವಿಲ್ಲ, ಸಂಸ್ಕೃತಿಯೂ ಇಲ್ಲ. ಕರೊನಾ ಬರೋದಕ್ಕೂ ಮೊದಲೇ ದೇಶದಲ್ಲಿ ಆರ್ಥಿಕತೆ ದಿವಾಳಿಯಾಗಿತ್ತು. ರಾಜ್ಯದ ಸ್ಥಿತಿಯೂ ಅಷ್ಟೆ. ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ನಮ್ಮ ಆಡಳಿತಾವಧಿ ವೇಳೆ ಆರ್ಥಿಕಶಿಸ್ತಿನಲ್ಲಿ ರಾಜ್ಯ ಸರ್ಕಾರ ಮೊದಲ ಸ್ಥಾನದಲ್ಲಿತ್ತು. ಈಗ ದಿವಾಳಿಯಾಗಿದೆ ಎಂದು ಟೀಕಿಸಿದರು.

    ಇದನ್ನೂ ಓದಿರಿ ಹೋಟೆಲ್​ ಮಾಲೀಕನ ಮಗನೇ ಎಂಜಲು ಮಾಡ್ತಾನೆ.. ಇಲ್ಲಿ ಊಟ ಮಾಡೋಕು ಮುನ್ನ ಎಚ್ಚರ!

    ನನ್ನ ಮತ್ತು ಡಿಕೆಶಿ ನಡುವೆ ಅತ್ಯುತ್ತಮ ಬಾಂಧವ್ಯ-ಸಂಬಂಧ ಇದೆ. ನಮ್ಮ ನಡುವೆ ಸರಿ ಇಲ್ಲ ಅನ್ನೋದೆಲ್ಲ ಶುದ್ಧ ಸುಳ್ಳು. ಬಿಜೆಪಿಯಲ್ಲಿ ಭಿನ್ನಮತ ಇರೋದು ಸತ್ಯ. ಈ ಭಿನ್ನಮತ ಮುಂದುವರಿಯುತ್ತದೆ. ಅದರಲ್ಲಿ ನಾವು ಕೈ ಹಾಕಲ್ಲ. ಸರ್ಕಾರ ಬಿದ್ದು ಹೋದರೆ ನೋಡೋಣ ಎಂದರು.

    ರಾಜ್ಯದಲ್ಲಿ ಬಿ.ಎಸ್​. ಯಡಿಯೂರಪ್ಪ ಹೆಸರಿಗಷ್ಟೆ ಸಿಎಂ, ಅವರ ಪುತ್ರ ವಿಜಯೇಂದ್ರ ಸಹಿ ಮಾಡೋದು. ಅಸಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆ ಎಂದು ಜನ ಹೇಳ್ತಾರೆ, ನಾವಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಬಿಜೆಪಿಯ ಅಸಮಾಧಾನಿತ ಶಾಸಕರು ಭೇಟಿಯಾಗಿ, ಸಹಜವಾಗಿ ಅಸಮಾಧಾನ ತೋಡಿಕೊಂಡಿದಾರೆ ಅಷ್ಟೆ ಎಂದರು. ಪ್ರಗತಿಪರರ ಮೇಲೆ ಕೊಪ್ಪಳದಲ್ಲಿ ಕೇಸ್ ಹಾಕುವುದನ್ನ ಖಂಡಿಸ್ತೀನಿ. ಬಿಜೆಪಿ ಆ ರೀತಿ ಮಾಡಕೂಡದು ಎಂದು ಆಗ್ರಹಿಸಿದರು.

    ಇದನ್ನೂ ಓದಿರಿ ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts