More

    ಮೂತ್ರ ವಿರ್ಸಜನೆಗೆ ಜಾಗ ಹುಡುಕುವ ಸ್ಥಿತಿ…ಇದು ಹುನಗುಂದದ ಪರಿಸ್ಥಿತಿ

    ಹುನಗುಂದ: ತಾಲೂಕು ಕೇಂದ್ರವಾದ ಹುನಗುಂದದಲ್ಲಿ ಸಾರ್ವಜನಿಕ ಶೌಚಗೃಹಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಪಟ್ಟಣಕ್ಕೆ ವಿವಿಧ ಉದ್ದೇಶಗಳಿಗೆ ಬರುವ ಜನರು, ಮೂತ್ರ ವಿಸರ್ಜನೆಗೆ ಖಾಲಿ ನಿವೇಶನ, ಪಾಳು ಬಿದ್ದ ಕಟ್ಟಡಗಳತ್ತ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ

    ಪಟ್ಟಣಕ್ಕೆ ಪ್ರತಿದಿನ ಸಂತೆಗಾಗಿ, ವಿವಿಧ ಕೆಲಸಗಳಿಗಾಗಿ ಆಗಮಿಸುವ ಗ್ರಾಮೀಣ ಪ್ರದೇಶದ ಜನ, ನಿತ್ಯ ವ್ಯಾಪಾರ-ವಹಿವಾಟಿಗೆ ಮಾರುಕಟ್ಟೆಯಲ್ಲಿ ಸೇರುವ ರೈತರು, ಬೀದಿಬದಿಯಲ್ಲಿ ಹಣ್ಣು, ತರಕಾರಿ ಮಾರುವ ವ್ಯಾಪಾರಸ್ಥರು, ಗ್ರಾಹಕರು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಶೌಚಗೃಹಗಳ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪಟ್ಟಣದಲ್ಲಿ ಸಮರ್ಪಕ ಸಾರ್ವಜನಿಕ ಶೌಚಗೃಹಗಳಿಲ್ಲ. ಹೀಗಾಗಿ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ

    ನಾರುತ್ತಿರುವ ಕಟ್ಟಡ: ವಿವಿಧೆಡೆ ಇರುವ ಸಾರ್ವಜನಿಕ ಶೌಚಗೃಹ ಮತ್ತು ಮೂತ್ರಾಲಯಗಳಲ್ಲಿ ನೈರ್ಮಲ್ಯದ ಕೊರತೆ ಕಾಡುತ್ತಿದೆ. ಕಟ್ಟಡ ಗಬ್ಬು ನಾರುತ್ತಿರುವುದರಿಂದ ಜನರು ಸಾರ್ವಜನಿಕ ಶೌಚಗೃಹಗಳ ಬಳಕೆಗೆ ಹಿಂದೇಟು ಹಾಕುತ್ತಾರೆ. ಒಮ್ಮೆ ಅದರೊಳಗೆ ಹೋಗಿ ಬಂದರೆ ಜೀವಮಾನದಲ್ಲಿ ಇನ್ನೊಮ್ಮೆ ಯಾರೂ ಅಲ್ಲಿ ಮೂತ್ರ ವಿಸರ್ಜಿಸಲು ಬಯಸುವುದಿಲ್ಲ. ಅಸಮರ್ಪಕ ನಿರ್ವಹಣೆ ಮತ್ತು ಅಸ್ವಚ್ಛತೆಯಿಂದ ಅನುಪಯುಕ್ತವಾಗಿವೆ

    ಶೌಚಗೃಹಗಳ ನಿರ್ಮಾಣಕ್ಕೆ ಚುನಾಯಿತ ಜನಪ್ರತಿನಿಽಗಳು, ಪುರಸಭೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸಂತೆ ಭಾಗದಲ್ಲಿ, ಬಸ್ ನಿಲ್ದಾಣ ಹತ್ತಿರ, ವಿ.ಮ. ಸರ್ಕಲ್, ಚನ್ನಮ್ಮ ಸರ್ಕಲ್, ಅಂಚೆ ಕಚೇರಿ ಹೀಗೆ ಹಲವಾರು ಸ್ಥಳಗಳಲ್ಲಿ ಪುರಸಭೆಯವರು ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು ಎಂದು ಕರವೇ ಅಧ್ಯಕ್ಷ ಶರಣು ಗಾಣಿಗೇರ, ಶಿಕ್ಷಕ ಎಂ.ಆರ್.ಚಿತ್ತರಗಿ ಆಗ್ರಹಿಸಿದ್ದಾರೆ.

    • ಪಟ್ಟಣದ ಸಾರ್ವಜನಿಕರಿಗೆ ಅನೇಕ ಕಡೆ ಶೌಚಗೃಹಗಳ ಸಮಸ್ಯೆ ಉಂಟಾಗಿದೆ. ಈಗಾಗಲೇ ಸಾರ್ವಜನಿಕ ಶೌಚಗೃಹಗಳ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
      ಅಶೋಕ ಪಾಟೀಲ ಮುಖ್ಯಾಧಿಕಾರಿ, ಹುನಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts