More

    ಸವಾಲು ಮೆಟ್ಟಿ ನಿಂತ ಪತ್ರಕರ್ತರು

    ಹುಬ್ಬಳ್ಳಿ: ಲಾಕ್​ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದಾಗ ಪತ್ರಕರ್ತರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದರು. ನಿತ್ಯದ ಆಗುಹೋಗುಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಕಷ್ಟ ಕಾಲದಲ್ಲಿಯೂ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಕಾರ್ಯನಿರ್ವಹಿಸಿದವು. ಸಂಕಷ್ಟ-ಸವಾಲಿನ ಸಮಯದಲ್ಲಿಯೂ ಮಾಧ್ಯಮದವರು ತಮ್ಮ ಜವಾಬ್ದಾರಿಯಿಂದ ವಿಮುಖರಾಗಲಿಲ್ಲ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಹೇಳಿದರು.

    ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ (ಧಾಜಿಕಾಪ) ಸಂಘದಿಂದ ಶುಕ್ರವಾರ ಇಲ್ಲಿಯ ಶ್ರೀ ರಂಭಾಪುರಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಅನೇಕರು ಉದ್ಯೋಗ ತೊರೆದರೆ, ಕೆಲವರು ಸೋಂಕಿನಿಂದಾಗಿ ಜೀವ ಕಳೆದುಕೊಂಡರು ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಕರೊನಾ ಸೋಂಕಿನಿಂದಾಗಿ ಸಾವಿಗೀಡಾದ ಪತ್ರಕರ್ತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಒದಗಿಸುವಲ್ಲಿ ಸಂಘ ಯಶಸ್ವಿಯಾಗಿದೆ. ಪತ್ರಕರ್ತರಿಗೆ ಆರೋಗ್ಯ ಯೋಜನೆ ಜಾರಿಗೊಳಿಸಬೇಕೆಂಬ 5 ವರ್ಷಗಳ ಬೇಡಿಕೆಗೆ ಈಗಿನ ಸರ್ಕಾರ ಸ್ಪಂದಿಸಿದೆ ಎಂದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತಮ್ಮ ತಂದೆ ಬಸನಗೌಡ ಪಾಟೀಲ ಮುನೇನಕೊಪ್ಪ ಹೆಸರಿನಲ್ಲಿ ದತ್ತಿ ಸ್ಥಾಪನೆಗೆ 1 ಲಕ್ಷ ರೂ. ದೇಣಿಗೆ ನೀಡಿದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕೋವಿಡ್ ಸಮಯದಲ್ಲಿ ಪತ್ರಕರ್ತರ ಕಾರ್ಯನಿರ್ವಹಣೆ ಸ್ಮರಣೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪತ್ರಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು.

    ಸಂಘದ ಜಿಲ್ಲಾಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಕಾರ್ಯಕಾರಿಣಿ ಸದಸ್ಯ ರಾಜು ವಿಜಾಪುರ, ಶಶಿಧರ ಸಾಲಿ, ಆಕ್ಸ್​ಫರ್ಡ್ ಕಾಲೇಜ್ ಅಧ್ಯಕ್ಷ ವಸಂತ ಹೊರಟ್ಟಿ, ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    2019-20ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

    ಹಿರಿಯ ಪತ್ರಕರ್ತ ಹನುಮಂತ ಹೂಗಾರ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಹಾಗೂ ಜಯಶ್ರೀ ವಾಳ್ವೇಕರ ಅವರಿಗೆ ಅವ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಅತ್ಯುತ್ತಮ ಲೇಖನ ಪ್ರಶಸ್ತಿಯನ್ನು ವಿಜಯವಾಣಿಯ ಹಿರಿಯ ಉಪಸಂಪಾದಕ ನಾಗರಾಜ ಹೆಗಡೆ ಮತ್ತಿಗಾರ, ಶ್ರೀ ಎಂ.ಡಿ. ಗೋಗೇರಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ವಿಜಯವಾಣಿ ಛಾಯಾಗ್ರಾಹಕ ಗುರು ಭಾಂಡಗೆ, ಅಕ್ಸ್​ಫರ್ಡ್ ಕಾಲೇಜ್ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ವರದಿಗಾರ ಹರ್ಷ ಕುಲಕರ್ಣಿ ಹಾಗೂ ಕ್ಯಾಮರಾಮನ್ ವಿನಾಯಕ ಪೂಜಾರಿ ಅವರಿಗೆ ಪ್ರದಾನ ಮಾಡಲಾಯಿತು.

    ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಯನ್ನು ಪ್ರಕಾಶ ಶೇಟ್, ದಿ. ಶ್ರೀಮತಿ ಮುರಿಗೆಮ್ಮ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಯನ್ನು ಕೃಷ್ಣಿ ಶಿರೂರ, ಜಿತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಕಲಘಟಗಿಯ ಪ್ರಭಾಕರ ನಾಯಕ, ಶ್ರೀ ಸುಲೇಮಾನ ಅಬ್ದುಲ್ ಅಜೀಜಸಾಬ ಮುನವಳ್ಳಿ ಅತ್ಯುತ್ತಮ ಲೇಖನ ಪ್ರಶಸ್ತಿಯನ್ನು ಪ್ರಮೋದ ಕೆ., ಡಾ. ಬಿ.ಎಫ್. ದಂಡಿನ್ ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿಯನ್ನು ಮಂಜುನಾಥ ಹೂಗಾರ ಪಡೆದರು.

    ದಿ. ಅಣ್ಣಪ್ಪ ಶೆಟ್ಟಿ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಯನ್ನು ನವೀನ ಪರದೇಶಿ, ಕ್ಯಾಮರಾಮನ್ ನಾರಾಯಣಗೌಡ ಅವರಿಗೆ ನೀಡಲಾಯಿತು. ರಾಜ್ಯಮಟ್ಟದ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಅಮರೇಗೌಡ ಗೋನವಾರ, ವಿದ್ಯಾ ಕೊಡ್ಲಕೆರೆ ಹಾಗೂ ಬಸವರಾಜ ಹವಾಲ್ದಾರ್ ಅವರಿಗೆ ‘ನಮ್ಮವರá- ನಮ್ಮ ಹೆಮ್ಮೆ’ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts